ಬೆಂಗಳೂರು: ಕೆಜಿಎಫ್ ಚಾಚ ಹರೀಶ್ ರಾಯ್ ಗೆ ಕ್ಯಾನ್ಸರ್ ಉಲ್ಬಣಗೊಂಡಿದ್ದು ಸಹಾಯಕ್ಕಾಗಿ ಸ್ಟಾರ್ ನಟರು, ಉದಾರಿಗಳನ್ನು ಎದಿರು ನೋಡುತ್ತಿದ್ದಾರೆ.
ಕೆಜಿಎಫ್ ಸಿನಿಮಾದ ಚಾಚ ಎಂದೇ ಖ್ಯಾತರಾಗಿರುವ ಸ್ಯಾಂಡಲ್ ವುಡ್ ನಟ ಹರೀಶ್ ಥೈರಾಯ್ಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಅವರು ಬಹಳ ಸಮಯದಿಂದ ಈ ಖಾಯಿಲೆಗೆ ತುತ್ತಾಗಿದ್ದಾರೆ. ಈ ಹಿಂದೆ ಅವರ ಚಿಕಿತ್ಸೆ ರಾಕಿಂಗ್ ಸ್ಟಾರ್ ಯಶ್ ನೆರವಾಗಿದ್ದರು ಎಂಬ ಸುದ್ದಿಗಳಿತ್ತು.
ಈಗ ಅವರ ಆರೋಗ್ಯ ಸ್ಥಿತಿ ಮತ್ತೆ ಉಲ್ಬಣಗೊಂಡಿದೆ. ಕ್ಯಾನ್ಸರ್ ಪರಿಣಾಮ ಹೊಟ್ಟೆ, ಕಾಲುಗಳಲ್ಲಿ ನೀರು ತುಂಬಿಕೊಂಡಿದ್ದು ಚಿಕಿತ್ಸೆಗೆ ಪರದಾಡುತ್ತಿದ್ದಾರೆ. ಹೀಗಾಗಿ ಅವರು ಈಗ ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಮತ್ತು ಉದಾರಿಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ.
ಅವರಿಗೆ ಸಹಾಯ ಮಾಡಲು ಬಯಸುವವರು ಈ ವಿವರಗಳಿಗೆ ಧನ ಸಹಾಯ ಮಾಡಬಹುದು. ಇಲ್ಲಿದೆ ವಿವರ.
Google Pay/ PhonePe- 9606960656
ನಟ ಹರೀಶ್ ರಾಯ್ ಅವರಿಗೆ ಸಹಾಯ ಮಾಡಲು ಇಚ್ಛಿಸುವವರು, ಈ ಕೆಳಗಿನ ಬ್ಯಾಂಕ್ ಖಾತೆಗೆ ಅಥವಾ UPI ನಂಬರ್ ಗೆ ಹಣವನ್ನು ಪಾವತಿಸಬಹುದು.
Name - Harish Roy
Account Number - 38510865963
IFSC code - SBIN0004408
Bank - State Bank Of India