Select Your Language

Notifications

webdunia
webdunia
webdunia
webdunia

ಮಡೆನೂರು ಮನು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೆ ಶಿವಣ್ಣ ಏನು ಮಾಡಿದ್ರು ವಿಡಿಯೋ ನೋಡಿ

Madenur Manu

Krishnaveni K

ಬೆಂಗಳೂರು , ಸೋಮವಾರ, 25 ಆಗಸ್ಟ್ 2025 (17:00 IST)
ಬೆಂಗಳೂರು: ಆಕ್ಷೇಪಾರ್ಹ ಅಡಿಯೋ ವಿವಾದಕ್ಕೆ ಸಂಬಂಧಿಸಿದಂತೆ ಉದಯೋನ್ಮುಖ ನಟ ಮಡೆನೂರು ಮನು ಸ್ಯಾಂಡಲ್ ವುಡ್ ಚಕ್ರವರ್ತಿ ಶಿವಣ್ಣ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮಡೆನೂರು ಮನು ವಿರುದ್ಧ ಸಹ ನಟಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಮನು ಮಾತನಾಡಿದ್ದಾರೆ ಎನ್ನಲಾದ ಅಡಿಯೋ ಒಂದು ವೈರಲ್ ಆಗಿತ್ತು. ಈ ಅಡಿಯೋದಲ್ಲಿ ಶಿವಣ್ಣ ಕೆಲವೇ ದಿನಗಳಲ್ಲಿ ಸತ್ತೋಗ್ತಾರೆ ಎಂದು ಮನು ಹೇಳಿದ ಧ್ವನಿ ವೈರಲ್ ಆಗಿತ್ತು.

ಈ ಹಿನ್ನಲೆಯಲ್ಲಿ ಅವರನ್ನು ಚಿತ್ರರಂಗದಿಂದ ನಿಷೇಧಿಸಲಾಗಿತ್ತು. ಬಳಿಕ ಕ್ಷಮೆ ಕೇಳಿ ಪತ್ರ ಬರೆದ ಹಿನ್ನಲೆಯಲ್ಲಿ ನಿಷೇಧ ಹಿಂತೆಗೆಯಲಾಗಿತ್ತು. ಇದೀಗ ಮನು ಶಿವಣ್ಣ ಕಾರ್ಯಕ್ರಮವೊಂದಕ್ಕೆ ಬಂದಿದ್ದಾಗ ಕಾರಿನ ಬಳಿ ಬಂದು ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ್ದಾರೆ.

ಮನು ಕ್ಷಮೆ ಯಾಚನೆಗೆ ಬಂದಾಗ ಇದೆಲ್ಲಾ ಬೇಡ ಎಂದು ಶಿವಣ್ಣ ನಯವಾಗಿ ತಿರಸ್ಕರಿಸಿದ್ದಾರೆ. ಆದರೂ ಕೇಳದೇ ಅವರು ಕಾಲಿಗೆ ಬಿದ್ದು ತಪ್ಪಾಗಿದೆ ಎಂದು ಕ್ಷಮೆ ಯಾಚಿಸಿದ್ದಾರೆ.  ಈ ವಿಡಿಯೋ ಇಲ್ಲಿದೆ ನೋಡಿ.



Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ ನಟ ದಿನೇಶ್ ಮಂಗಳೂರು ಇನ್ನಿಲ್ಲ