ಬೆಂಗಳೂರು: ಸ್ಯಾಂಡಲ್ ವುಡ್ ನಟ ಅಜೇಯ ರಾವ್ ದಾಂಪತ್ಯದಲ್ಲಿ ಬಿರುಕು ಕಂಡುಬಂದಿದೆ. ಅಜೇಯ ರಾವ್- ಸಪ್ನಾ ದೂರವಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ಕನ್ನಡ ಚಿತ್ರರಂಗದಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಅಜೇಯ್ ರಾವ್-ಸಪ್ನಾ 11 ವರ್ಷಗಳ ದಾಂಪತ್ಯಕ್ಕೆ ಗುಡ್ ಬೈ ಹೇಳುತ್ತಿದ್ದಾರೆ ಎನ್ನಲಾಗಿದೆ. ಸಪ್ನಾ ಸಿನಿಮಾ ಹಿನ್ನಲೆಯವರಲ್ಲ. ಇಬ್ಬರಿಗೂ ಒಬ್ಬ ಪುತ್ರಿಯಿದ್ದಾಳೆ.
ಕೆಲವು ದಿನಗಳ ಹಿಂದಷ್ಟೇ ಯೂಟ್ಯೂಬ್ ಚಾನೆಲ್ ಒಂದಕ್ಕೆ ಇಬ್ಬರೂ ಜೊತೆಯಾಗಿ ಸಂದರ್ಶನವೊಂದನ್ನು ನೀಡಿದ್ದರು. ಇಲ್ಲಿ ಇಬ್ಬರೂ ತಮ್ಮಿಬ್ಬರ ನಡುವಿನ ಲವ್ ಸ್ಟೋರಿಯನ್ನು ಮುಕ್ತವಾಗಿ ಮಾತನಾಡಿದ್ದರು. ಆದರೆ ಈಗ ವಿಚ್ಛೇದನಕ್ಕೊಳಗಾಗುತ್ತಿರುವ ಆಘಾತಕಾರಿ ಸುದ್ದಿ ಕೇಳಿಬಂದಿದೆ. ಅಷ್ಟು ಚೆನ್ನಾಗಿದ್ದ ದಂಪತಿ ಈಗ ಏನಾಯ್ತು ಎಂದು ಎಲ್ಲರಿಗೂ ಅಚ್ಚರಿಯಾಗಿದೆ.
ನಟರಾಗಿದ್ದರೂ ಮನೆಯಲ್ಲಿ ಈಗಲೂ ಪಕ್ಕಾ ಸಾಮಾನ್ಯರಂತೇ ಸರಳವಾಗಿ ಜೀವನ ಮಾಡುತ್ತಿದ್ದ ಜೋಡಿ ಅವರು. ಮೇಡ್ ಫಾರ್ ಈಚ್ ಅದರ್ ಎಂಬತಿದ್ದರು. ಸಪ್ನಾ ಸಿನಿಮಾ ಲೋಕದಿಂದ ದೂರವೇ ಇದ್ದರು. ಆದರೆ ಈಗ ಪತಿಯ ವಿರುದ್ಧ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಕೇಸ್ ದಾಖಲಿಸಿದ್ದಾರೆ. ಹೀಗಾಗಿ ಕೇವಲ ಮುನಿಸಿಗಿಂತಲೂ ದೊಡ್ಡ ಮಟ್ಟದಲ್ಲಿ ಏನೋ ಆಗಿರಬೇಕು ಎಂದು ಹೇಳಲಾಗುತ್ತಿದೆ.