Publish Date: Sat, 16 Aug 2025 (16:47 IST)
Updated Date: Sat, 16 Aug 2025 (16:55 IST)
ಬೆಂಗಳೂರು: ನಟ ಅಜಯ್ ರಾವ್ 11 ವರ್ಷಗಳ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಕಾರಣವೇನು ಎಂದು ಈಗ ಭಾರೀ ಚರ್ಚೆಯಾಗುತ್ತಿದೆ. ಮೂಲಗಳ ಪ್ರಕಾರ ದಂಪತಿಗಳ ನಡುವೆ ವೈಮನಸ್ಯ ಮೂಡಲು ಇದೇ ಕಾರಣ ಎನ್ನಲಾಗುತ್ತಿದೆ.
ಅಜಯ್ ರಾವ್ ವಿರುದ್ಧ ಪತ್ನಿ ಸ್ವಪ್ನಾ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಇಬ್ಬರ ನಡುವೆ ಅಂತಹ ಕಲಹವಾಗಲು ಕಾರಣವೇನೆಂದು ಈಗ ಭಾರೀ ಚರ್ಚೆಯಾಗುತ್ತಿದೆ. ಮೂಲಗಳ ಪ್ರಕಾರ ಸಿನಿಮಾಗಾಗಿ ಮಾಡಿದ ಸಾಲಗಳೇ ವೈಮನಸ್ಯಕ್ಕೆ ಕಾರಣ ಎನ್ನಲಾಗುತ್ತಿದೆ.
ಅಜಯ್ ರಾವ್ ಇತ್ತೀಚೆಗೆ ಯುದ್ಧಕಾಂಡ ಸಿನಿಮಾ ನಿರ್ಮಿಸಿ ನಟಿಸಿದ್ದರು. ಈ ಸಿನಿಮಾಗಾಗಿ ಸಾಲ ಮಾಡಿಕೊಂಡಿದ್ದರು. ಇದನ್ನು ಅವರೇ ಸಿನಿಮಾ ಪ್ರಮೋಷನ್ ವೇಳೆ ಹೇಳಿಕೊಂಡಿದ್ದರು. ಆದರೆ ಪತ್ನಿ ಸ್ವಪ್ನಾಗೆ ಸಾಲ ಮಾಡಿಕೊಂಡು ಸಿನಿಮಾ ಮಾಡುವುದು ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ದಂಪತಿ ನಡುವೆ ವೈಮನಸ್ಯಕ್ಕೆ ಕಾರಣ ಎನ್ನಲಾಗುತ್ತಿದೆ.
ಅಜಯ್ ರಾವ್ ಇತ್ತೀಚೆಗೆ ತಮ್ಮ ದುಬಾರಿ ಬಿಎಂಡಬ್ಲ್ಯು ಕಾರನ್ನೂ ಮಾರಿದ್ದರು. ಇದನ್ನು ಮಾರಬೇಡಿ ಎಂದು ಮಗಳು ಅಳುವ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು. 2014 ರಲ್ಲಿ ಮದುವೆಯಾಗಿದ್ದ ದಂಪತಿ ಈಗ ಇದ್ದಕ್ಕಿದ್ದಂತೆ ವಿಚ್ಛೇದನದತ್ತ ಮುಖ ಮಾಡಲು ಸಾಲಗಳೇ ಕಾರಣ ಎನ್ನಲಾಗುತ್ತಿದೆ.