ಬೆಂಗಳೂರು: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಆಕ್ಟೀವ್ ಆಗಿರುವ ಬಿಗ್‌ಬಾಸ್ ಖ್ಯಾತಿಯ ಸೋನು ಶ್ರೀನಿವಾಸ ಗೌಡ ಅವರು ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ. ವರ್ಷದ ಹಿಂದೆ ಮಾಲ್ಡೀವ್ಸ್‌ಗೆ ಹೋಗಿದ್ದ ಸೋನು, ತನ್ನ ಬೋಲ್ಸ್ ಲುಕ್ ಹಾಗೂ ರೀಲ್ಸ್ ವಿಚಾರದಲ್ಲಿ ಸುದ್ದಿಯಾಗಿದ್ದರು.
ಇದೀಗ ಸೋಲು ಶ್ರೀಲಂಕಾದ ಬೀಚ್‌ನಲ್ಲಿ ಫುಲ್ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಪಡ್ಡೆ ಹೈಕಳು ಸೋನು ಲುಕ್‌ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಕಲರ್ ಫುಲ್ ಬಿಕಿನಿ ತೊಟ್ಟು, ಹಾರ್ಟ್ ಶೇಪ್‌ನಲ್ಲಿ ಕೈಯನ್ನು ಮೇಲೆತ್ತಿ ಸೋನು ಪೋಸ್ ಕೊಟ್ಟಿದ್ದಾರೆ. ಈ ಫೊಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಸೋನು ಅವರು ಹಂಚಿಕೊಂಡಿದ್ದಾರೆ.
ಸೋನು ಅವರು ಪೋಟೋಗೆ ಪಡ್ಡೆ ಹುಡುಗರು ಬಗೆ ಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಈ ಹಿಂದೆ ಸಹ ಸೋನು ಬಿಕಿನಿ ತೊಟ್ಟು ಬೀಚ್‌ನಲ್ಲಿ ಪೋಸ್ ಕೊಟ್ಟು ಯುವಕರ ನಿದ್ದೆ ಕದ್ದಿದ್ದರು.
ಒಬ್ಬರು ನವ ಯುಗದಲ್ಲಿ ನವ ಯುವತಿಯರ ನವರಂಗಿ ಆಟ ಹೆಚ್ಚಾಯಿತು ಎಂದರೆ, ಮತ್ತೊಬ್ಬರು ಸ್ವಲ್ಪ ದಿನಗಳ ನಂತರ ಮತ್ತೇ ಹಾಟ್ ಲುಕ್‌ನಲ್ಲಿ ಸೋನು ಎಂದು ಹಾರ್ಟ್ ಇಮೋಜಿ ಹಾಕಿದ್ದಾರೆ.
ಮತ್ತೊಂಬ್ಬರು ಇಂಥ ಬಟ್ಟೆ ಹಾಕ್ಕೊಂಡು ಸೋಶಿಯಲ್‌ನಲ್ಲಿ ಹಾಕಬೇಡ ಅಕ್ಕ ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಾರೆ ಸೋನು ಹಾಟ್ ಲುಕ್ ಮಾತ್ರ ಪಡ್ಡೆ ಹುಡುಗರ ನಿದ್ದೆ ಕದ್ದಿದೆ.