Select Your Language

Notifications

webdunia
webdunia
webdunia
webdunia

ಬೀದಿಗೆ ಬಂತು ಯಶ್ ತಾಯಿ, ದೀಪಿಕಾ ದಾಸ್ ಜಗಳ: ಆ ಯೋಗ್ಯತೆ ನಿಮಗಿಲ್ಲ ಎಂದ ದೀಪಿಕಾ

Deepika Das

Krishnaveni K

ಬೆಂಗಳೂರು , ಶನಿವಾರ, 23 ಆಗಸ್ಟ್ 2025 (09:19 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಮತ್ತು ಅವರ ತಂಗಿ ಮಗಳು ದೀಪಿಕಾ ದಾಸ್ ಜಗಳ ಬೀದಿಗೆ ಬಂದಿದೆ. ನನ್ನ ಬಗ್ಗೆ ಆ ಮಾತನಾಡುವ ಯೋಗ್ಯತೆ ನಿಮಗಿಲ್ಲ ಎಂದು ನೇರವಾಗಿ ಕೌಂಟರ್ ಕೊಟ್ಟಿದ್ದಾರೆ ದೀಪಿಕಾ.

ಎಲ್ಲರಿಗೂ ಗೊತ್ತಿರುವ ಹಾಗೆ ದೀಪಿಕಾ ದಾಸ್ ತಾಯಿ ಹಾಗೂ ಯಶ್ ತಾಯಿ ಪುಷ್ಪಾ ಅಕ್ಕ ತಂಗಿಯರು. ಆದರೆ ಇವರ ಕುಟುಂಬದ ನಡುವೆ ಮುಸುಕಿನ ಗುದ್ದಾಟವೇ ಇದೆ. ಇದಕ್ಕೆ ಸಾಕ್ಷಿಯೆಂಬಂತೆ ದೀಪಿಕಾ ಎಲ್ಲೂ ಯಶ್ ನನ್ನ ಅಣ್ಣ ಎಂದು ಹೇಳಿಕೊಂಡಿರಲಿಲ್ಲ.

ಇತ್ತೀಚೆಗೆ ಕೊತ್ತಲವಾಡಿ ಸಿನಿಮಾ ಪ್ರಮೋಷನ್ ವೇಳೆ ಪುಷ್ಪಾ ಒಂದು ಸಂದರ್ಶನದಲ್ಲಿ ದೀಪಿಕಾಗೆ ಚಿಕ್ಕಂದಿನಿಂದಲೂ ನನ್ನ ಕಂಡರೆ ಭಯ. ಅದಕ್ಕೇ ಹೆಚ್ಚು ಮಾತನಾಡಲ್ಲ ಎಂದಿದ್ದರು. ಇನ್ನೊಂದು ಸಂದರ್ಶನದಲ್ಲಿ ದೀಪಿಕಾರನ್ನು ಹಾಕಿಕೊಂಡು ಸಿನಿಮಾ ಮಾಡುತ್ತೀರಾ? ಎಂದು ಕೇಳಿದ್ದಕ್ಕೆ ಅವಳಿಗೂ ನಮಗೂ ಆಗಿಬರಲ್ಲ. ಅವಳನ್ನು ಯಾವ ಹೀರೋಯಿನ್ ಅಂತ ಆಯ್ಕೆ ಮಾಡಬೇಕು? ಅವಳು ಏನು ಸಾಧನೆ ಮಾಡಿದ್ದಾಳೆ? ಅವಳನ್ನು ನಾವು ದೂರವೇ ಇಟ್ಟಿದ್ದೇವೆ’ ಎಂದಿದ್ದರು.

ಪುಷ್ಪಾ ಹೇಳಿಕೆ ದೀಪಿಕಾ ಗಮನಕ್ಕೆ ಬಂದಿದ್ದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕೌಂಟರ್ ಕೊಟ್ಟಿದ್ದಾರೆ. ನಾಗಿಣಿ ಧಾರವಾಹಿ ಮೂಲಕ ತನ್ನದೇ ಆದ ಅಭಿಮಾನಿ ವರ್ಗದವರನ್ನು ಹೊಂದಿರುವ ದೀಪಿಕಾ ಈಗ ಮದುವೆಯಾಗಿ ತಮ್ಮದೇ ಸಂಸಾರ ನಡೆಸುತ್ತಿದ್ದಾರೆ.

ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ತಿರುಗೇಟು  ಕೊಟ್ಟಿರುವ ದೀಪಿಕಾ ‘ಹೊಸ ಕಲಾವಿದರನ್ನು ಬೆಳೆಸುವ ಜನರು ಕಲಾವಿದರಿಗೆ ಬೆಲೆ ಕೊಡುವುದನ್ನು ಕಲಿಯಬೇಕು. ಇಲ್ಲಿಯವರೆಗೆ ಯಾರ ಹೆಸರನ್ನೂ ಹೇಳಿಕೊಂಡು ಬಂದಿಲ್ಲ ಮುಂದೇನೂ ಬರಲ್ಲ. ಕೆಲವರಿಗೆ ಬೆಲೆ ಕೊಟ್ಟ ಮಾತ್ರಕ್ಕೆ ಯಾರನ್ನು ಕಂಡು ಭಯ ಯಾರಿಗೂ ಇಲ್ಲ. ಅದು ಅಮ್ಮ ಆದರೂ ಸರಿ ದೊಡ್ಡಮ್ಮ ಆದರೂ ಸರಿ ಅಥವಾ ಪುಷ್ಪಮ್ಮ ಆದರೂ ಸರಿ. ವಿತ್ ಡ್ಯೂ ರೆಸ್ಪೆಕ್ಟ್ ಟು ಸ್ಟಾರ್ ಆಫ್ ಅವರ್ ಇಂಡಸ್ಟ್ರಿ. ನಾನು ಯಾವ ದೊಡ್ಡ ನಟಿ ಅಲ್ಲದಿದ್ದರು ಏನು ಸಾಧನೆ ಮಾಡಿದದ್ದರೂ.. ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ’ ಎಂದು ಖಡಕ್ ಕೌಂಟರ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುದೀಪ್ ಖರೀದಿಸಿದ ಜಾಗದಲ್ಲಿ ವಿಷ್ಣು ಅಭಿಮಾನ ಸ್ಮಾರಕ ನಿರ್ಮಾಣಕ್ಕೆ ಚಾಲನೆ