ಬೆಂಗಳೂರು: ತಮ್ಮ ಚೊಚ್ಚಲ ನಿರ್ಮಾಣದ ಸಿನಿಮಾ ಕೊತ್ತಲವಾಡಿ ಪ್ರೆಸ್ ಈವೆಂಟ್ ನಲ್ಲಿ ತಮ್ಮ ಸೊಸೆ ರಾಧಿಕಾ ಪಂಡಿತ್ ಬಗ್ಗೆ ಮಾತನಾಡಿದ್ದಾರೆ. ನನ್ನ ಸೊಸೆ ರಾಧಿಕಾ ಮಗ ಯಶ್ ಗಿಂತಾ ದೊಡ್ಡ ಕಿಲಾಡಿ ಎಂದಿದ್ದಾರೆ.
ಯಶ್ ತಾಯಿ ಪುಷ್ಪ ಮತ್ತು ತಂದೆ ಅರುಣ್ ಕುಮಾರ್ ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಚೊಚ್ಚಲ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಇಂದು ಪುಷ್ಪ ಮಾತನಾಡಿದ್ದಾರೆ.
ಈ ವೇಳೆ ಪತ್ರಕರ್ತರು ಈ ಸಿನಿಮಾ ಬಗ್ಗೆ ಯಶ್ ಮತ್ತು ರಾಧಿಕಾ ಏನು ಹೇಳಿದ್ದಾರೆ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಪುಷ್ಪ ಅವರು ಇದುವರೆಗೂ ಇದರಲ್ಲಿ ಇನ್ ವಾಲ್ವ್ ಆಗಿಲ್ಲ. ನನ್ನ ಸೊಸೆ ರಾಧಿಕಾ ಕತೆ ಸೆಲೆಕ್ಟ್ ಮಾಡುವುದರಲ್ಲಿ ಕಿಲಾಡಿ. ನನ್ನ ಮಗನಿಗಿಂತ ದೊಡ್ಡ ಕಿಲಾಡಿ ಅವಳು ಎಂದರು. ಅವರ ಈ ಮಾತಿಗೆ ಪತ್ರಕರ್ತರು ನಗೆಗಡಲಲ್ಲಿ ತೇಲಿದರು.
ಬಳಿಕ ಮುಂದುವರಿದ ಅವರು ಯಶ್ ಆಗ್ಲೀ ರಾಧಿಕಾ ಆಗ್ಲೀ ಸಿನಿಮಾ ವಿಚಾರದಲ್ಲಿ ಡಿಗ್ರಿ ಮುಗಿಸಿದ್ದಾರೆ. ನಾವು ಇನ್ನೂ ಎ ಬರಿತಿದ್ದೀವಿ. ನೋಡೋಣ ಸಿನಿಮಾ ನೋಡಿ ಮುಂದೆ ಒಪ್ಪಿಕೊಳ್ಳುತ್ತಾರಾ ನೋಡೋಣ ಎಂದಿದ್ದಾರೆ.