ಬೆಂಗಳೂರು: ಹುಟ್ಟುಹಬ್ಬಕ್ಕೆ ಮುನ್ನ ಇಂದು ಪತ್ರಿಕಾಗೋಷ್ಠಿ ನಡೆಸಿದ ಕಿಚ್ಚ ಸುದೀಪ್ ನಟ ದರ್ಶನ್ ಬಗ್ಗೆ ಪ್ರಶ್ನೆ ಎದುರಾದಾಗ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
ನಾಳೆ ಕಿಚ್ಚನ ಬರ್ತ್ ಡೇ. ಈ ಹಿನ್ನಲೆಯಲ್ಲಿ ಇಂದು ರಾತ್ರಿ ಅವರು ನಂದಿ ಲಿಂಕ್ ಗ್ರೌಂಡ್ ನಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ. ಇದಕ್ಕೆ ಮೊದಲು ಅವರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈ ವೇಳೆ ಜೈಲಿನಲ್ಲಿರುವ ನಟ ದರ್ಶನ್ ಬಗ್ಗೆ ಪ್ರಶ್ನೆ ಕೇಳಲಾಯಿತು.
ಇದಕ್ಕೆ ಉತ್ತರಿಸಿದ ಅವರು ಅವರಿಗೆ ಅವರದ್ದೇ ಆದ ನೋವುಗಳಿರುತ್ತದೆ. ಅದರ ಹಿಂದೆ ಅವರ ಅಭಿಮಾನಿಗಳು ಇರುತ್ತಾರೆ. ಅಭಿಮಾನಿಗಳಿಗೂ ಒಂದು ನಂಬಿಕೆಯಿರುತ್ತದೆ. ಸರ್ಕಾರ, ಕಾನೂನು ಅದರ ಕೆಲಸ ಮಾಡುತ್ತದೆ. ಈ ಸಂದರ್ಭದಲ್ಲಿ ನಾವು ಮಾತನಾಡೋದು ತಪ್ಪಾಗುತ್ತದೆ ಎಂದಿದ್ದಾರೆ.
ಇನ್ನು ದರ್ಶನ್ ಜೊತೆಗಿನ ಸ್ನೇಹ ಕಡಿದುಕೊಂಡಿದ್ದರ ಬಗ್ಗೆ ಮಾತನಾಡಿರುವ ಅವರು ಯಾರದ್ದೋ ಮಾತು ಕೇಳಿಕೊಂಡು ದೂರವಾಗಲು ನಾವು ಚಿಕ್ಕ ಮಕ್ಕಳಲ್ಲ.ನಾವಿಬ್ಬರೂ ಮಾತನಾಡದೇ ಇರುವುದಕ್ಕೆ ಕೆಲವು ಕಾರಣಗಳಿವೆ. ಅದು ನಮಗೆ ಗೊತ್ತಿದೆ. ನಾವ್ಯಾಕೆ ಹೀಗಿದ್ದೀವಿ ಎಂದು ನಮಗೆ ಗೊತ್ತು. ಸೂರ್ಯ ಮತ್ತು ಚಂದ್ರ ಅದರ ಸ್ಥಾನದಲ್ಲಿದ್ದರೇ ಚಂದ ಎಂದಿದ್ದಾರೆ.