ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ರ ವೀಕ್ಷಕರಿಗೆ ಗುಡ್ ನ್ಯೂಸ್. ಪರಿಸರ ನಿಯಮ ಉಲ್ಲಂಘಿಸಿದ್ದಕ್ಕೆ ಬಿಗ್ ಬಾಸ್ ಶೋ ಅರ್ಧಕ್ಕೇ ನಿಂತಿತ್ತು. ಆದರೆ ಈಗ ಮತ್ತೆ ಪುನರಾರಂಭವಾಗುತ್ತಿದೆ.
ಬಿಗ್ ಬಾಸ್ 12 ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್ ನಲ್ಲಿ ಪರಿಸರ ನಿಯಮ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾಡಳಿತ ಬೀಗ ಹಾಕಿಸಿತ್ತು. ಇದರಿಂದಾಗಿ ನಿನ್ನೆ ರಾತ್ರಿ ಇದ್ದಕ್ಕಿದ್ದಂತೇ ಸ್ಪರ್ಧಿಗಳನ್ನು ಮನೆಯಿಂದ ಹೊರ ಕರೆತರಲಾಗಿತ್ತು.
ಈ ಗೊಂದಲದಿಂದಾಗಿ ಬಿಗ್ ಬಾಸ್ ಮತ್ತೆ ಆರಂಭವಾಗುವುದೋ, ಇಲ್ಲವೋ ಎಂಬ ಗೊಂದಲ ವೀಕ್ಷಕರಲ್ಲಿತ್ತು. ಆದರೆ ಈಗ ಜಾಲಿವುಡ್ ಸ್ಟುಡಿಯೋಸ್ ಸಂಸ್ಥೆಗೆ ತಪ್ಪು ಸರಿಪಡಿಸಿಕೊಳ್ಳಲು 10 ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ಇದಕ್ಕೆ ಜಾಲಿವುಡ್ ಕೂಡಾ ಒಪ್ಪಿಕೊಂಡಿದೆ.
ಹೀಗಾಗಿ ಈಗ ಬಿಗ್ ಬಾಸ್ ಪುನರಾರಂಭವಾಗುವುದು ಬಹುತೇಕ ಪಕ್ಕಾ ಆಗಿದೆ. ಇಂದೇ ಮತ್ತೆ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಶಿಫ್ಟ್ ಆಗುವ ಸಾಧ್ಯತೆಯಿದೆ. ಹೀಗಾಗಿ ಶೋ ಮತ್ತೆ ನಿರಾತಂಕವಾಗಿ ಮುಂದುವರಿಯಲಿದೆ.