ಬೆಂಗಳೂರು: ಪರಿಸರ ನಿಯಮ ಉಲ್ಲಂಘನೆ ಮಾಡಿದ ಆರೋಪದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12 ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್ ಗೆ ಬೀಗ ಮುದ್ರೆ ಹಾಕಲಾಗಿದೆ. ಆದರೆ ಇದೆಲ್ಲಾ ನಡೆದಿದ್ದು ಕಿಚ್ಚ ಸುದೀಪ್ ಮೇಲಿನ ಸಿಟ್ಟಿನಿಂದ ಎಂದು ಅವರ ಅಭಿಮಾನಿಗಳು ಆರೋಪಿಸುತ್ತಿದ್ದಾರೆ.
ಈ ಹಿಂದೆ ಬೆಂಗಳೂರು ಚಿತ್ರೋತ್ಸವಕ್ಕೆ ಕಿಚ್ಚ ಸುದೀಪ್ ಸೇರಿದಂತೆ ಸ್ಯಾಂಡಲ್ ವುಡ್ ನ ಅನೇಕ ನಾಯಕರು ಹೋಗಿರಲಿಲ್ಲ. ಅವರ ನಟ್ಟು ಬೋಲ್ಟ್ ಟೈಟ್ ಮಾಡಲು ನನಗೆ ಗೊತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಇದಕ್ಕೆ ಕಿಚ್ಚ ಸುದೀಪ್ ಕೂಡಾ ಇನ್ನೊಂದು ಕಾರ್ಯಕ್ರಮದಲ್ಲಿ ತಿರುಗೇಟು ನೀಡಿದ್ದರು.
ಇದೀಗ ಬಿಗ್ ಬಾಸ್ ಶೋಗೆ ಇದೇ ನೆಪದಲ್ಲಿ ತೊಂದರೆ ಕೊಡಲಾಗುತ್ತಿದೆ ಎಂದು ಕಿಚ್ಚ ಸುದೀಪ್ ಫ್ಯಾನ್ಸ್ ಆರೋಪಿಸುತ್ತಿದ್ದಾರೆ. ಇದುವರೆಗೆ ಬಿಗ್ ಬಾಸ್ ಹಲವು ವಿವಾದಕ್ಕೊಳಗಾಗಿದ್ದು ಇದೆ. ಆದರೆ ಇದೇ ಮೊದಲ ಬಾರಿಗೆ ಶೋವನ್ನೇ ನಿಲ್ಲಿಸಲಾಗುತ್ತಿದೆ.
ಇದಕ್ಕೆ ಕಾರಣ ಸುದೀಪ್ ಮೇಲೆ ಡಿಕೆಶಿ ಸಿಟ್ಟು ಎಂಬುದು ಫ್ಯಾನ್ಸ್ ಆರೋಪ. ಆದರೆ ಕುಟ್ಟಿ ಪುಡಿ ಮಾಡಲು ಇದು ಬಂಡೆ ಅಲ್ಲ, ಅಪ್ಪಟ ಬಂಗಾರ. ನೀವು ಕುಟ್ಟಿದಷ್ಟೂ ಬಂಗಾರದ ಹೊಳಪು ಹೆಚ್ಚಾಗುತ್ತದೆ ಎಂದಿದ್ದಾರೆ.