ಬೆಂಗಳೂರು: ಬಿಗ್ ಬಾಸ್ ಕನ್ನಡ ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್ ಬಂದ್ ಮಾಡಿ ಇದೀಗ ರಾಜ್ಯ ಸರ್ಕಾರವೇ ಇಕ್ಕಟ್ಟಿಗೆ ಸಿಲುಕಿದೆ. ಬಿಗ್ ಬಾಸ್ ಬಂದ್ ಮಾಡಿಸಿದ್ದು ಧ್ವೇಷದ ಕಾರಣಕ್ಕೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಈಗ ಕಾಮೆಂಟ್ ಗಳು ಜೋರಾಗಿ ಬರುತ್ತಿವೆ.
ಬಿಗ್ ಬಾಸ್ ಕನ್ನಡ ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್ ನಲ್ಲಿ ಪರಿಸರ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಸರ್ಕಾರ ಬೀಗ ಜಡಿಸಿತ್ತು. ಆದರೆ ಇದಾದ ಕೆಲವೇ ಕ್ಷಣಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಲವರು ಸರ್ಕಾರದ ವಿರುದ್ಧವೇ ಟೀಕೆ ಶುರು ಮಾಡಿದ್ದಾರೆ.
ಜಾಲಿವುಡ್ ನಲ್ಲಿ ತ್ಯಾಜ್ಯ ವಿಲೇವಾರಿಯಾಗುತ್ತಿಲ್ಲ ಎಂಬ ಕಾರಣ ನೀಡಿ ಶೋ ಬಂದ್ ಮಾಡಿಸಿರುವುದು ಸರಿ. ಆದರೆ ಇದಕ್ಕಿಂತ ದೊಡ್ಡ ಸಮಸ್ಯೆಗಳು ಅನೇಕ ಕಡೆ ಇದೆ. ಆದರೆ ಅಲ್ಲೆಲ್ಲೂ ಸರ್ಕಾರ ಕಂಡೂ ಕಾಣದಂತಿದೆ. ಇದಲ್ಲದೆ ಜಾಲಿವುಡ್ ಗೆ 18 ತಿಂಗಳ ಹಿಂದೆ ನೋಟಿಸ್ ನೀಡಿ ಈಗ ಬಿಗ್ ಬಾಸ್ ಆರಂಭವಾದ ಹೊತ್ತಿನಲ್ಲೇ ಬೀಗ ಜಡಿದಿದೆ.
ಅಂದರೆ ಇದರ ಹಿಂದೆ ಡಿಕೆ ಶಿವಕುಮಾರ್ ಈ ಹಿಂದೆ ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಹೇಳಿಕೆ ಕೆಲಸ ಮಾಡಿದೆಯಾ? ಕಿಚ್ಚ ಸುದೀಪ್ ವಿರುದ್ಧ ಡಿಕೆಶಿ ಸೇಡು ತೀರಿಸಿಕೊಂಡರಾ ಎಂಬಿತ್ಯಾದಿ ಸುದ್ದಿ ಹಬ್ಬಿತ್ತು. ಈಗ ಬಿಗ್ ಬಾಸ್ ಬಂದ್ ಮಾಡಿಸಲು ಹೋಗಿ ಸರ್ಕಾರದ ಸಚಿವರುಗಳೇ ಇದು ಧ್ವೇಷದ ರಾಜಕಾರಣವಲ್ಲ ಎಂದು ಸಮಜಾಯಿಷಿ ಕೊಡುವ ಪರಿಸ್ಥಿತಿ ಬಂದಿದೆ.