ಜಾಲಿವುಡ್ ಸ್ಟುಡಿಯೋವನ್ನು ಸೀಜ್ ಮಾಡಿದ ಪರಿಣಾಮ ಕನ್ನಡದ ಬಿಗ್‌ಬಾಸ್ ಮನೆಗೆ ಬೀಗ ಹಾಕಿದ್ದರಿಂದ ಸ್ಪರ್ಧಿಗಳನ್ನು ಮನೆಯಿಂದ ಹೊರಕರೆತರಲಾಗಿದೆ. ಹೀಗಾಗಿ ಬಿಗ್‌ಬಾಸ್ ಶೂಟಿಂಗ್ ಸ್ಥಗಿತಗೊಂಡಿದೆ.
ಇನ್ನು, ಈ ಘಟನೆಯ ಬೆನ್ನಲ್ಲೆ ನಿನ್ನೆ (ಮಂಗಳವಾರ) ರಾತ್ರಿ ಪ್ರಸಾರವಾಗಬೇಕಿದ್ದ ಸಂಚಿಕೆಯಲ್ಲಿ ಕೊಂಚ ವ್ಯತ್ಯಯ ಆಗಿದೆ. ಬಿಗ್‌ಬಾಸ್ ಕಾರ್ಯಕ್ರಮ ನೋಡಲು ಸಿದ್ಧರಾಗಿದ್ದ ವೀಕ್ಷಕರು ಕೆಲ ಕಾಲ ಗೊಂದಲಗೊಂಡಿದ್ದಾರೆ.
ಅನಿರೀಕ್ಷಿತ ಕಾರಣಗಳಿಂದಾಗಿ ಜಿಯೋ ಹಾಟ್‌ಸ್ಟಾರ್‌ನಲ್ಲಿ 'ಬಿಗ್‌ಬಾಸ್'ನ ಇಂದಿನ ಸಂಚಿಕೆಯ ಪ್ರಕಟಣೆಯ ಸಮಯದಲ್ಲಿ ವ್ಯತ್ಯಯ ಸಂಭವಿಸಿದೆ. ಈ ಅಡಚಣೆಗಾಗಿ ಕ್ಷಮೆ ಕೋರುತ್ತೇವೆ. ಇಂದಿನ ಸಂಚಿಕೆ ಈಗ ಜಿಯೋಹಾಟ್‌ಸ್ಟಾರ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದ ಹಿನ್ನೆಲೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸಂಸ್ಥೆಯು ಮನರಂಜನೆ ಹಾಗೂ ಇತರ ಸಾಹಸ ಚಟುವಟಿಕೆ ಇದೀಗ ಬ್ರೇಕ್ ಹಾಕಲಾಗಿದೆ. ಪೊಲೀಸ್ ಭದ್ರತೆಯಲ್ಲಿ ಜಾಲಿವುಡ್‌ಗೆ ಬೀಗ ಹಾಕಿದ್ದಾರೆ.