Select Your Language

Notifications

webdunia
webdunia
webdunia
webdunia

BB Season 12, ದೊಡ್ಮನೆಯಲ್ಲಿ ಈ ಜೋಡಿ ಲವ್‌ ಸ್ಟೋರಿ ಭಾರೀ ಇರಿಟೇಶನ್ ಎಂದ ನೆಟ್ಟಿಗರು

BigBoss Season 12

Sampriya

ಬೆಂಗಳೂರು , ಸೋಮವಾರ, 27 ಅಕ್ಟೋಬರ್ 2025 (15:25 IST)
Photo Credit X
ಪ್ರತಿ ಬಾರಿ ಬಿಗ್‌ಬಾಸ್ ಸೀಸನ್‌ನಲ್ಲಿ ಒಂದೊಂದು ಪ್ರೇಮ ಕತೆಗಳು ಹುಟ್ಟಿಕೊಳ್ಳುವುದು ಸಹಜ. ಆದರೆ ಈ ಬಾರಿ ಶುರುವಾದ ಜೋಡಿಯ ಆಟ ನೋಡಲು ಸಾಧ್ಯವಾಗುತ್ತಿಲ್ಲ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. 

ಸ್ನೇಹಿತರಾಗಿರುವ ಗಿಲ್ಲಿ, ಕಾವ್ಯ ಜೋಡಿ ನಡುವೆ ಇದೀಗ ದೊಡ್ಮನೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸೂರಜ್ ಹಾಗೂ ರಾಶಿಕಾ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ. 

ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಸೂರಜ್ ಸಿಂಗ್‌ಗೆ ಬಿಗ್‌ಬಾಸ್, ಮನೆಯಲ್ಲಿ ಸುಂದರವಾಗಿರುವ ಹುಡುಗಿಗೆ ರೋಸ್ ಕೊಡುವಂತೆ ಹೇಳಿತು. ಈ ಚಟುವಟಿಕೆಯಲ್ಲಿ ರಾಶಿಕಾಗೆ ಕೆಂಪು ಗುಲಾಬಿ ಕೊಟ್ಟಿದ್ದರು. ಕಣ್ಣೋಟದಲ್ಲಿ ಶುರುವಾದ ಇಬ್ಬರ ಪ್ರೀತಿ ಇದೀಗ ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾಗಿದ್ದಾರೆ. 

ನಿನ್ನೆ ನೋ ಎಲಿಮಿನೇಷನ್ ಆಗಿದ್ದರು, ಬಿಗ್‌ಬಾಸ್‌ ರಾಸಿಕಾ ಹಾಗೂ ಸ್ಪಂದನಾ ಅವರನ್ನು ಔಟ್ ಮಾಡಿ ಶಾಕ್ ನೀಡಿದ್ದರು. ಇನ್ನೂ ರಾಶಿಕಾ ಎಲಿಮಿನೇಟ್ ಆಗುತ್ತಿರುವ ವಿಚಾರ ತಿಳಿದಾಗ ಸೂರಜ್ ಕಣ್ಣೀರು ಹಾಕಿದರು. ಇನ್ನೂ ನೋ ಎಲಿಮಿನೇಷನ್ ಎಂದು ತಿಳಿದಾಗ ಸೂರಜ್ ಓಡಿ ಹೋಗಿ ರಾಶಿಕಾಳನ್ನು ತಬ್ಬಿಕೊಂಡಿದ್ದಾನೆ. ಕೆಲ ಹೊತ್ತು ಅವರು ಹಾಗೆಯೇ  ಇದ್ದುದನ್ನು ನೋಡಿ, ಮನೆಮಂದಿ ನಾವು ಇದ್ದೇವೆ ಎಂದು ತಮಾಷೆ ಮಾಡಿದ್ದಾರೆ. 

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಆಗಿದ್ದು, ಒಂದು ವಾರದಲ್ಲಿ ಪರಿಚಯವಾಗಿ ಅದೇ ವಾರದಲ್ಲೇ ಪ್ರೀತಿ ಶುರುವಾಗುತ್ತಾ ಎಂದು ಕಮೆಂಟ್ ಮಾಡಿದ್ದಾರೆ. 

ಸದ್ಯಕ್ಕೆ ಸೂರಜ್ ರಾಶಿಕಾ ಲವ್‌ಸ್ಟೋರಿ ಬಿಗ್‌ಬಾಸ್ ಮನೆಯಲ್ಲಿ ಜೋರಾಗಿದ್ದು, ಕ್ಲೈಮ್ಯಾಕ್ಸ್‌ವರೆಗೂ ಇರುತ್ತೋ ಇಲ್ವೋ ಎಂಬ ಕುತೂಹಲ ಹೆಚ್ಚಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

Kurnool Bus Tragedy: ಆ ಜೀವಗಳು ಅದೆಷ್ಟೂ ನೋವು ಅನುಭವಿಸರಬೇಕು: ರಶ್ಮಿಕಾ ಮಂದಣ್ಣ ಕಂಬನಿ