Select Your Language

Notifications

webdunia
webdunia
webdunia
webdunia

BB Season12: ಇನ್ನೂ ಆಟ ಶುರು ಮಾಡುತ್ತೇನೆಂದ ಮಲ್ಲಮ್ಮ, ದೊಡ್ಮನೆಯಿಂದ ಆಚೆ ಬಂದ್ರಾ

BigBoss Season 12

Sampriya

ಬೆಂಗಳೂರು , ಬುಧವಾರ, 29 ಅಕ್ಟೋಬರ್ 2025 (15:23 IST)
Photo Credit X
ಬೆಂಗಳೂರು: ಇದುವರೆಗಿನ ಬಿಗ್‌ಬಾಸ್ ಸೀಸನ್‌ನಲ್ಲಿ ಅತ್ಯಂತ ಹಿರಿಯ ಮಹಿಳೆಯಾಗಿ ಎಂಟ್ರಿಕೊಟ್ಟ ಮಲ್ಲಮ್ಮ ಇದೀಗ ದೊಡ್ಮನೆಯಿಂದ ಹೊರಬಂದಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. 

ವೈಯಕ್ತಿಕ ನಿರ್ಧಾರದಿಂದ ಮಲ್ಲಮ್ಮ ಬಿಗ್‌ಬಾಸ್ ಮನೆಯಿಂದ ಆಚೆ ಬಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. 

ಇನ್ನೂ ಟ್ರೋಲ್ ಆಗುತ್ತಿರುವ ಪೋಸ್ಟ್‌ಗೆ  ಬಗೆ ಬಗೆ ಕಮೆಂಟ್ ಬಂದಿದೆ. ಬರ್ಲಿ ಬಿಡಿ, ಅಲ್ಲಿ ಏನ್ ಕಿತ್ತು ದಬಾಕಿದ್ದು ಇಲ್ಲ. ಅಷ್ಟರಲ್ಲಿ ಈ ಅಜ್ಜಿ ಏನ್ ಮಾಡಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. 

ಮತ್ತೊಬ್ಬರು ಈ ಅಜ್ಜಿ ಬಿಗ್‌ಬಾಸ್‌ ಮನೆಯಲ್ಲಿ ಏನೂ ಸಾಧನೆಯನ್ನು ಮಾಡಿಲ್ಲ ಎಂದಿದ್ದಾರೆ. 

ಮಲ್ಲಮ್ಮ ಅವರು ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದು, ಇದೀಗ ಅವರು ಆಚೆ ಬಂದಿರುವ ವಿಚಾರ ಇನ್ನಷ್ಟೇ ತಿಳಿದುಬರಬೇಕಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಹಾಸಿಗೆ, ದಿಂಬು ಕೇಳಿದ್ದ ದರ್ಶನ್ ಗೆ ಕೋರ್ಟ್ ಕೊಟ್ಟಿದೆ ಮಹತ್ವದ ಆದೇಶ