Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್ ಚಾಂಪಿಯನ್ ಆದ ಭಾರತ ಹಾಕಿ ತಂಡಕ್ಕೆ ಅಭಿನಂದನೆಗಳ ಮಹಾಪೂರ

Indian Hockey

Krishnaveni K

ನವದೆಹಲಿ , ಸೋಮವಾರ, 8 ಸೆಪ್ಟಂಬರ್ 2025 (08:19 IST)
Photo Credit: X
ನವದೆಹಲಿ: ದಕ್ಷಿಣ ಕೊರಿಯಾವನ್ನು ಸೋಲಿಸಿ ಏಷ್ಯಾ ಕಪ್ ಚಾಂಪಿಯನ್ ಆದ ಭಾರತ ಪುರುಷರ ಹಾಕಿ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಪ್ರಧಾನಿ ಮೋದಿ ಸೇರಿದಂತೆ ರಾಜಕೀಯ ನಾಯಕರು, ಅಭಿಮಾನಿಗಳು ಹಾಕಿ ತಂಡವನ್ನು ಅಭಿನಂದಿಸುತ್ತಿದ್ದಾರೆ. ಇದು ನಮಗೆ ಹೆಮ್ಮೆಯ ಕ್ಷಣ. ಈ ಗೆಲುವು ವಿಶೇಷವಾಗಿದೆ. ಯಾಕೆಂದರೆ ನಾವು ಹಾಲಿ ಚಾಂಪಿಯನ್ನರನ್ನು ಸೋಲಿಸಿದ್ದೇವೆ ಎಂದು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.

ದಕ್ಷಿಣ ಕೊರಿಯಾವನ್ನು 4-1 ಅಂತರದಿಂದ ಸೋಲಿಸಿದ ಭಾರತ ನಾಲ್ಕನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ ಶಿಪ್ ಮುಡಿಗೇರಿಸಿಕೊಂಡಿತು. ದಿಲ್ ಪ್ರೀತ್ ಸಿಂಗ್ ಹೊಡೆದ ಎರಡು ಗೋಲ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಈ ಗೆಲುವಿನೊಂದಿಗೆ ಭಾರತ ಮುಂದಿನ ವರ್ಷ ನಡೆಯಲಿರುವ ಹಾಕಿ ವಿಶ್ವಕಪ್ ಗೆ ಅರ್ಹತೆ ಪಡೆಯಿತು.

ಭಾರತದ ಪಾಲಿಗೆ ಇದು ನಾಲ್ಕನೇ ಚಾಂಪಿಯನ್ ಶಿಪ್ ಆಗಿದೆ. ಈ ಮೂಲಕ ಅತೀ ಹೆಚ್ಚು ಬಾರಿ ಏಷ್ಯಾ ಕಪ್ ಗೆದ್ದ ತಂಡಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಕೊನೆಯ ಬಾರಿಗೆ 2017 ರಲ್ಲಿ ಢಾಕಾದಲ್ಲಿ ಭಾರತ ಏಷ್ಯಾ ಕಪ್ ಹಾಕಿ ಗೆದ್ದುಕೊಂಡಿತ್ತು. ಇದೀಗ ಬರೋಬ್ಬರಿ 8 ವರ್ಷಗಳ ಬಳಿಕ ಮತ್ತೆ ಚಾಂಪಿಯನ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Pro Kabaddi League: ಹ್ಯಾಟ್ರಿಕ್‌ ಸೋಲಿನ ಬಳಿಕ ಬೆಂಗಳೂರು ಬುಲ್ಸ್‌ಗೆ ಮೊದಲ ಗೆಲುವಿನ ಸಿಹಿ