ಬೀಜಿಂಗ್: ಶಾಂಘೈ ಶೃಂಗ ಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ ಶತ್ರು ರಾಷ್ಟ್ರ ಪಾಕಿಸ್ತಾನಿ ಪ್ರಧಾನಿ ಶಹಬಾಜ್ ಷರೀಫ್ ಎದುರೇ ಇದ್ದರೂ ತಿರುಗಿಯೂ ನೋಡದೇ ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಸಾಗಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಚೀನಾದಲ್ಲಿ ನಡೆಯುತ್ತಿರುವ ಶಾಂಘೃ ಶೃಂಗ ಸಭೆಯಲ್ಲಿ ಏಷ್ಯಾದ ದೈತ್ಯ ರಾಷ್ಟ್ರಗಳ ನಾಯಕರು ಪಾಲ್ಗೊಂಡಿದ್ದಾರೆ. ಆ ಪೈಕಿ ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಪಾಕ್ ಪ್ರಧಾನಿ ಷಹಬಾಜ್ ಷರೀಫ್ ಕೂಡಾ ಸೇರಿದ್ದಾರೆ.
ರಷ್ಯಾ ಮತ್ತು ಭಾರತದ ನಾಯಕರ ನಡುವಿನ ಸ್ನೇಹ ಎಂತಹದ್ದು ಎಂದು ಎಲ್ಲರಿಗೂ ಗೊತ್ತೇ ಇದೆ. ಪುಟಿನ್ ರನ್ನು ಕಂಡೊಡನೆ ಮೋದಿ ಅಪ್ಪುಗೆ ನೀಡಿ ಭಾರೀ ಮಾತುಕತೆಯಲ್ಲಿ ಮಗ್ನರಾಗಿದ್ದಾರೆ. ಇದೇ ಸ್ಥಳದಲ್ಲಿ ಪಾಕ್ ಪ್ರಧಾನಿ ಷಹಬಾಜ್ ಕೂಡಾ ನಿಂತಿದ್ದರು.
ಆದರೆ ಷಹಬಾಜ್ ಕಡೆಗೆ ಮೋದಿ ತಿರುಗಿಯೂ ನೋಡದೇ ರಷ್ಯಾ ಅಧ್ಯಕ್ಷರನ್ನು ಮಾತನಾಡಿಸುತ್ತಾ ಅವರನ್ನು ದಾಟಿಕೊಂಡೇ ಮುಂದೆ ಸಾಗಿದ್ದಾರೆ. ಮೋದಿ ತಮ್ಮನ್ನು ದಾಟಿ ಮುಂದೆ ಸಾಗುತ್ತಿರುವುದನ್ನು ಷಹಬಾಜ್ ವಾರೆಗಣ್ಣಿನಲ್ಲಿ ನೋಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು ನಾನಾ ರೀತಿಯಲ್ಲಿ ಟ್ರೋಲ್ ಆಗುತ್ತಿದೆ.