ವಾಷಿಂಗ್ಟನ್: ಸಾಮಾಜಿಕ ಜಾಲತಾಣದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕುರಿತು 'ಟ್ರಂಪ್ ಈಸ್ ಡೆಡ್ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
'TRUMP IS DEAD ಎಂದು ಇದುವರೆಗೂ 50 ಸಾವಿರಕ್ಕೂ ಅಧಿಕ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ. Where is Donald Trump ಹಾಗೂ it happened ಎನ್ನುವುದು ಕೂಡ ಎಕ್ಸ್ನಲ್ಲಿ ಸದ್ದು ಮಾಡುತ್ತಿದೆ.
ಇದಕ್ಕೆಲ್ಲ ಕಾರಣ ಕಳೆದ ಕೆಲ ದಿನಗಳಿಂದ ಟ್ರಂಪ್ ಆರೋಗ್ಯ ಉತ್ತಮವಾಗಿಲ್ಲ ಎಂಬ ವರದಿಗಳು ಬಿತ್ತರಗೊಂಡಿದ್ದರು. ಇದೀಗ ಅಧ್ಯಕ್ಷರ ಭವಿಷ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
79 ವರ್ಷದ ನಿಧನ ಹೊಂದಿರದ ಅಮೆರಿಕ ಅಧ್ಯಕ್ಷರ ಮರಣ ವಾರ್ತೆಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಕಾರಣವಾಗಿರುವುದು ಅಲ್ಲಿನ ಉಪಾಧ್ಯಕ್ಷರ ಹೇಳಿಕೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನೂ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ಹೇಳಿಕೆಯೂ ಈ ವದಂತಿಗೆ ಕಾರಣ ಎನ್ನಲಾಗಿದೆ. ಆ.27ಕ್ಕೆ ಯುಎಸ್‌ಎ ಟುಡೇಗೆ ನೀಡಿದ ಸಂದರ್ಶನದಲ್ಲಿ ಒಂದು ವೇಳೆ ಏನಾದರೂ ದುರಂತ ಸಂಭವಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೃತಪಟ್ಟರೆ ಅವರ ಜಾಗವನ್ನು ನಾನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ ಎಂದು ಹೇಳಿದ್ದರು. ಆ ಹೇಳಿಕೆಯು 'ಟ್ರಂಪ್ ಈಸ್ ಡೆಡ್ ಎಂದು ಹರಿದಾಡುವುದಕ್ಕೆ ಕಾರಣವಾಗಿದೆ.
ಅದೇ ಸಂದರ್ಶನದಲ್ಲಿ ಟ್ರಂಪ್ ಅವರು ಆರೋಗ್ಯವಾಗಿದ್ದಾರೆ. ಯಾವುದೇ ಗಂಭೀರ ಕಾಯಿಲೆಯಿಲ್ಲ ಎಂದು ವ್ಯಾನ್ಸ್ ಸ್ಪಷ್ಟಪಡಿಸಿದ್ದಾರೆ. ಆದರೆ, ಅಮೆರಿಕದ ಉಪಾಧ್ಯಕ್ಷರ ಹೇಳಿಕೆಯು 'ಟ್ರಂಪ್ ಈಸ್ ಡೆಡ್ ಆಗಿ ಬದಲಾಗಿದೆ.