ನವದೆಹಲಿ: ಪ್ರಧಾನಿ ಮೋದಿ ಎಸ್ ಸಿಒ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಚೀನಾಗೆ ಪ್ರವಾಸ ಮಾಡಲಿದ್ದಾರೆ. ಇದು ಅಮೆರಿಕಾ ಹೊಟ್ಟೆ ಉರಿಸೋದು ಗ್ಯಾರಂಟಿಯಾಗಿದೆ.
ಆಗಸ್ಟ್ 31 ರಿಂದ ಸೆಪ್ಟೆಂಬರ್ 1 ರವರೆಗೆ ಚೀನಾದಲ್ಲಿ ಶಾಂಘೈ ಶೃಂಗಸಭೆ ನಡೆಯಲಿದೆ. ಈ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಚೀನಾಗೆ ಭೇಟಿ ಕೊಡಲಿದ್ದಾರೆ. ಬರೋಬ್ಬರಿ 7 ವರ್ಷಗಳ ಬಳಿಕ ಮೋದಿ ಚೀನಾಗೆ ಭೇಟಿ ನೀಡುತ್ತಿದ್ದಾರೆ.
ಆದರೆ ಅಮೆರಿಕಾ ಜೊತೆ ಸಂಬಂಧ ಹಳಸಿರುವ ಬೆನ್ನಲ್ಲೇ ಏಷ್ಯಾದ ದೈತ್ಯ ಶಕ್ತಿಗಳು ಒಂದಾಗುತ್ತಿರುವುದು ವಿಶೇಷ. ಅಮೆರಿಕಾದ 50% ಟಾರಿಫ್ ನಿನ್ನೆಯಿಂದ ಜಾರಿಗೆ ಬಂದಿದೆ. ಇದರ ವಿರುದ್ಧ ಭಾರತ ಸಿಡಿದೆದ್ದಿದೆ. ಇದರ ಬೆನ್ನಲ್ಲೇ ಚೀನಾ ಜೊತೆಗೆ ಭಾರತದ ನಂಟು ಹತ್ತಿರವಾಗುತ್ತಿರುವುದು ಅಮೆರಿಕಾ ನಿದ್ದೆಗೆಡಿಸಲಿದೆ.
ಜೊತೆಗೆ ಈ ಶೃಂಗ ಸಭೆಯಲ್ಲಿ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮಾತ್ರವಲ್ಲದೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರನ್ನೂ ಭೇಟಿ ಮಾಡಲಿದ್ದಾರೆ. ಇವರಲ್ಲದೆ ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಮತ್ತೊಂದು ರಾಷ್ಟ್ರವೆಂದರೆ ಇರಾನ್. ಈ ಎಲ್ಲಾ ರಾಷ್ಟ್ರಗಳು ಒಂದಾದರೆ ಮುಂದೊಂದು ದಿನ ಅಮೆರಿಕಾಗೆ ದೊಡ್ಡ ನಷ್ಟ ಎಂದು ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಭಾರತದ ಪ್ರಧಾನಿಯ ಚೀನಾ ಭೇಟಿ ಅಮೆರಿಕಾ ಅಧ್ಯಕ್ಷರ ಹೊಟ್ಟೆ ಉರಿಸುವುದು ಗ್ಯಾರಂಟಿ.