ನ್ಯೂಯಾರ್ಕ್: ಭಾರತಕ್ಕೆ ಶೇ.50 ಸುಂಕ ವಿಧಿಸಿರುವುದರ ಬಗ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದಾರೆ. ಭಾರತಕ್ಕೆ ಸುಂಕ ವಿಧಿಸಿ ಕೇವಲ 8 ಗಂಟೆಯಾಗಿದೆಯಷ್ಟೇ. ನೋಡ್ತಾ ಇರಿ ಏನು ಮಾಡುತ್ತೇನೆಂದು ಎಂದು ಮತ್ತೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ರಷ್ಯಾ ಜೊತೆಗೆ ತೈಲ ಖರೀದಿಸುವ ದೇಶಗಳಿಗೆಲ್ಲಾ ಅಮೆರಿಕಾ ಸುಂಕ ವಿಧಿಸುವ ಎಚ್ಚರಿಕೆ ನೀಡಿದೆ. ಅದರಂತೆ ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತಕ್ಕೆ ಶೇ. 50 ರಷ್ಟು ಸುಂಕ ವಿಧಿಸಿರುವ ಡೊನಾಲ್ಡ್ ಟ್ರಂಪ್ ಈಗ ಮತ್ತೊಂದು ಬೆದರಿಕೆ ಹಾಕಿದ್ದಾರೆ.
ಭಾರತಕ್ಕೆ ಮಾತ್ರ ಯಾಕೆ ಹೆಚ್ಚವರಿ ಸುಂಕ ಹಾಕಿದ್ದೀರಿ? ಭಾರತಕ್ಕಿಂತ ಹೆಚ್ಚು ಮೌಲ್ಯ ತೈಲವನ್ನುರಷ್ಯಾದಿಂದ ಚೀನಾ ಖರೀದಿಸುತ್ತಿದೆ. ಹಾಗಿದ್ದರೂ ಚೀನಾಗೆ ಯಾಕೆ ಹೆಚ್ಚುವರಿ ಸುಂಕ ವಿಧಿಸಿಲ್ಲ ಎಂದು ಪ್ರಶ್ನೆ ಮಾಡಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, ನೋಡ್ತಿರಿ, ಭಾರತಕ್ಕೆ ಸುಂಕ ವಿಧಿಸಿ 8 ಗಂಟೆಯಾಗಿದೆಯಷ್ಟೇ. ಮುಂದೆ ಯಾವೆಲ್ಲಾ ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿಸುತ್ತವೋ ಆ ರಾಷ್ಟ್ರಗಳಿಗೆಲ್ಲಾ ಹೆಚ್ಚುವರಿ ಸುಂಕ ವಿಧಿಸಲಿದ್ದೇವೆ. ಚೀನಾಗೂ ಹೆಚ್ಚುವರಿ ಸುಂಕ ಹಾಕಲಿದ್ದೇವೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.