Select Your Language

Notifications

webdunia
webdunia
webdunia
webdunia

ಟ್ರಂಪ್ ಸುಂಕ ಹೆಚ್ಚಿಸಿದ್ದಕ್ಕೂ ನಮ್ಮನ್ನು ದೂರಬೇಡಿ ಮತ್ತೆ: ಮೋದಿಗೆ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯ

Mallikarjun Kharge

Krishnaveni K

ನವದೆಹಲಿ , ಗುರುವಾರ, 7 ಆಗಸ್ಟ್ 2025 (13:26 IST)
ನವದೆಹಲಿ: ಭಾರತದಿಂದ ರಫ್ತಾಗುವ ವಸ್ತುಗಳಿಗೆ ಅಮೆರಿಕಾ ಅಧ್ಯಕ್ಷ ಟಾರಿಫ್ ರೇಟ್ 50% ಗೆ ಹೆಚ್ಚಿಸಿರುವದರ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಟ್ರಂಪ್ ಸುಂಕ ಹೆಚ್ಚಿಸಿದ್ದಕ್ಕೂ ನಮ್ಮನ್ನು ದೂರಬೇಡಿ ಎಂದು ಮೋದಿಗೆ ಟಾಂಗ್ ಕೊಟ್ಟಿದ್ದಾರೆ.

ರಷ್ಯಾ ಜೊತೆಗೆ ಭಾರತದ ಆಪ್ತತೆ ಮತ್ತು ಅಮೆರಿಕಾದ ಹಾಲು ಉತ್ಪನ್ನಗಳನ್ನು ಭಾರತದ ಮಾರುಕಟ್ಟೆಗೆ ಬಿಡಲು ಒಪ್ಪದೇ ಇದ್ದಿದ್ದಕ್ಕೆ ಡೊನಾಲ್ಡ್ ಟ್ರಂಪ್ ಸಿಟ್ಟಿಗೆದ್ದು ಮನಬಂದಂತೆ ಭಾರತದ ಮೇಲೆ ಸುಂಕ ಏರಿಸುತ್ತಿದ್ದಾರೆ. ಇದರ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.

ಇದಕ್ಕೆಲ್ಲಾ ಮೋದಿ ಸರ್ಕಾರದ ವಿದೇಶಾಂಗ ನೀತಿಯ ವೈಫಲ್ಯವೇ ಕಾರಣ ಎಂದಿದ್ದಾರೆ. ‘ಇದಕ್ಕೂ ಇನ್ನು ಕಾಂಗ್ರೆಸ್ ನ 70 ವರ್ಷದ ಆಡಳಿತವೇ ಕಾರಣ ಎಂದು ದೂರಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಭಾರತದ ಹಿತಾಸಕ್ತಿಯೇ ಮುಖ್ಯ. ಈ ರೀತಿ ಭಾರತಕ್ಕೆ ಸುಂಕ ಏರಿಸಿ ನಮ್ಮನ್ನು ಧೃತಿಗೆಡಿಸಲು ಸಾಧ್ಯವಿಲ್ಲ. ಯಾಕೆಂದರೆ ನಮ್ಮ ಮೂಲ ಅಷ್ಟು ಗಟ್ಟಿಯಾಗಿದೆ. 1971 ರಲ್ಲಿ ಬಾಂಗ್ಲಾದೇಶ ಯುದ್ಧದ ಸಂದರ್ಭದಲ್ಲೂ ಇದೇ ರೀತಿ ಬೆದರಿಕೆಗಳು ಬಂದಿದ್ದವು. ಆದರೆ ಆಗಲೂ ಅಮೆರಿಕಾ ಜೊತೆ ಭಾರತ ಆತ್ಮಗೌರವಕ್ಕೆ ಧಕ್ಕೆಯಾಗದಂತೆ ಸಂಬಂಧ ಕಾಯ್ದುಕೊಂಡಿತ್ತು. ಆದರೆ ಈಗ ಭಾರತದ ವಿದೇಶಾಂಗ ನೀತಿ ದಯನೀಯ ಸ್ಥಿತಿಯಲ್ಲಿದೆ.

ಅಮೆರಿಕಾ ಭಾರತದ ಮೇಲೆ 50% ಸುಂಕ ವಿಧಿಸಿರುವುದರಿಂದ ಭಾರತದ ಆರ್ಥಿಕತೆ ಮೇಲೆ 3.75 ಲಕ್ಷ ಕೋಟಿ ಹೊರೆ ಬೀಳಲಿದೆ. ಇದರಿಂದ ಸಣ್ಣ ಉದ್ದಿಮೆದಾರರು ಸಂಷಕ್ಟಕ್ಕೀಡಾಗಲಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೈತರ ಹಿತಾಸಕ್ತಿ ಕಾಪಾಡಲು ನಷ್ಟ ಎದುರಿಸಲೂ ಸಿದ್ಧ: ಟ್ರಂಪ್ ಗೆ ಎಚ್ಚರಿಕೆ ನೀಡಿದ ಮೋದಿ