Select Your Language

Notifications

webdunia
webdunia
webdunia
webdunia

ಶಾಂಘೈ ಶೃಂಗ ಸಭೆಯಲ್ಲಿ ಮೋದಿ, ಜಿನ್ ಪಿಂಗ್ ಭಾರೀ ಕ್ಲೋಸ್: ಪಾಕ್ ಪ್ರಧಾನಿ ಸೀನ್ ನಲ್ಲೂ ಇಲ್ಲ

Modi-Xi Jinping-Putin

Krishnaveni K

ಬೀಜಿಂಗ್ , ಸೋಮವಾರ, 1 ಸೆಪ್ಟಂಬರ್ 2025 (12:55 IST)
Photo Credit: X
ಬೀಜಿಂಗ್: ಚೀನಾದಲ್ಲಿ ನಡೆಯುತ್ತಿರುವ ಶಾಂಘೈ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರೀ ಕ್ಲೋಸ್. ಆದರೆ ಪಾಕಿಸ್ತಾನ ಪ್ರಧಾನಿ ಷಹಬಾಜ್ ಷರೀಫ್ ಸೀನ್ ನಲ್ಲೂ ಕಾಣಿಸಿಕೊಂಡಿಲ್ಲ.

ಏಷ್ಯಾ ದೈತ್ಯ ರಾಷ್ಟ್ರಗಳು ಒಂದಾಗಿರುವ ಶಾಂಘೈ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ಮೋದಿ ಕೂಡಾ ಪಾಲ್ಗೊಂಡಿದ್ದಾರೆ. ನಿನ್ನೆಯಿಂದ ಇಂದಿನವರೆಗೆ ಶೃಂಗಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಪುಟಿನ್, ಜಿನ್ ಪಿಂಗ್ ಭಾರೀ ಸ್ನೇಹಿತರಂತೆ ಹರಟುತ್ತಿದ್ದಾರೆ.

ಒಂದು ವಿಡಿಯೋದಲ್ಲಿ ಈ ಮೂವರ ಜೊತೆಗೆ ಬೇರೆ ರಾಷ್ಟ್ರಗಳ ನಾಯಕರೂ ಸೇರಿಕೊಂಡು ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ. ಆದರೆ ಈ ದೃಶ್ಯದಲ್ಲಿ ಪಾಕಿಸ್ತಾನ ಪ್ರಧಾನಿ ಎಲ್ಲೂ ಕಾಣಿಸಿಕೊಂಡಿಲ್ಲ. ಅವರಿಂದ ಮೋದಿ ಅಂತರವನ್ನು ಕಾಯ್ದುಕೊಂಡಿದ್ದಾರೆ.

ಇತ್ತೀಚೆಗೆ ಪಹಲ್ಗಾಮ್ ಸಂಘರ್ಷದ ವೇಳೆಯೂ ಪಾಕಿಸ್ತಾನದ ಬೆಂಬಲಕ್ಕೆ ಚೀನಾ ನಿಂತಿತ್ತು. ಆದರೆ ಈಗ ಅಮೆರಿಕಾದ ಸುಂಕ ನೀತಿಯಿಂದಾಗಿ ಭಾರತ-ಚೀನಾ ನಡುವಿನ ಸಂಬಂಧ ವೃದ್ಧಿಯಾಗಿದೆ. ಇದರಿಂದ ಪಾಕಿಸ್ತಾನಕ್ಕೂ ಇರಿಸುಮುರಿಸು ತಂದಿರುವುದು ಸ್ಪಷ್ಟವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Arecanut Price: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಇಂದು ಬಂಪರ್ ಬೆಲೆ