Publish Date: Mon, 01 Sep 2025 (11:38 IST)
Updated Date: Mon, 01 Sep 2025 (11:40 IST)
ಬೆಂಗಳೂರು: ಕಳೆದ ಎರಡು ತಿಂಗಳಿನಿಂದ ನಿಂತ ನೀರಾಗಿದ್ದ ಅಡಿಕೆ ಬೆಲೆ ಇಂದು ಏಕಾಏಕಿ ಏರಿಕೆ ಕಂಡಿದ್ದು ಬೆಳೆಗಾರರಿಗೆ ಬಂಪರ್ ಸುದ್ದಿಯಾಗಿದೆ. ಅತ್ತ ಕಾಳುಮೆಣಸು ಬೆಲೆ, ಕೊಬ್ಬರಿ ಬೆಲೆ ಯಥಾಸ್ಥಿತಿಯಲ್ಲಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.
ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆ ಹೆಚ್ಚೂ ಇಲ್ಲ ಕಡಿಮೆಯೂ ಇಲ್ಲ ಎಂಬಂತಾಗಿತ್ತು. ಇದು ರೈತರ ಚಿಂತೆಗೆ ಕಾರಣವಾಗಿದೆ. ಆದರೆ ಇದೀಗ ಬೆಲೆ ಏಕಾಏಕಿ ಏರಿಕೆಯಾಗಿದೆ. ಹೊಸ ಅಡಿಕೆ ಬೆಲೆ ಕೆಲವು ದಿನಗಳಿಂದ 485 ರೂ.ಗಳಷ್ಟಿತ್ತು. ಇಂದು 5 ರೂ. ಏರಿಕೆಯಾಗಿ 490 ರೂ.ಗಳಷ್ಟಾಗಿದೆ. ಹಳೆ ಅಡಿಕೆ ಬೆಲೆ ಹಲವು ದಿನಗಳಿಂಧ ಯಥಾ ಸ್ಥಿತಿಯಲ್ಲಿತ್ತು. ಇಂದು ಹಳೆ ಅಡಿಕೆ ಬೆಲೆ 5 ರೂ. ಏರಿಕೆಯಾಗಿ 530 ರೂ.ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆಯೂ 5 ರೂ. ಏರಿಕೆಯಾಗಿ 530 ರೂ.ಗಳಾಗಿವೆ.
ಹೊಸ ಪಟೋರ ದರ ಮತ್ತು ಹಳೆ ಪಟೋರ ದರದಲ್ಲೂ ಯಾವುದೇ ಏರಿಕೆ ಅಥವಾ ಇಳಿಕೆಯಿಲ್ಲ. ಇವೆರಡರ ದರ 370 ರೂ. ಗಳಷ್ಟೇ ಇದೆ. ಹೊಸ ಉಳ್ಳಿ ದರದಲ್ಲಿ ವ್ಯತ್ಯಾಸವಾಗಿಲ್ಲ. ಇಂದೂ ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ತಲಾ 225 ರೂ.ಗಳಾಗಿದೆ. ಹೊಸ ಕೋಕ ಮತ್ತು ಹಳೆ ಕೋಕ ದರದಲ್ಲಿ ಮೊನ್ನೆ 5 ರೂ. ಏರಿಕೆಯಾಗಿತ್ತು. ಈಗ ಯಥಾಸ್ಥಿತಿಯಲ್ಲಿದ್ದು ಇಂದು ದರ 280 ರೂ.ಗೆ ಬಂದು ತಲುಪಿದೆ.
ಕಾಳುಮೆಣಸು, ಕೊಬ್ಬರಿ ದರ
ಕಾಳುಮೆಣಸು ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಏರಿಕೆಯೂ ಇಲ್ಲ ಇಳಿಕೆಯೂ ಇಲ್ಲ ಎನ್ನುವಂತಿದೆ. ಇಂದು ಕಾಳುಮೆಣಸು ಬೆಲೆ 675 ರೂ.ಗಳಷ್ಟಿದೆ. ಒಣ ಕೊಬ್ಬರಿ ಬೆಲೆ ಯಥಾಸ್ಥಿತಿಯಲ್ಲಿದ್ದು 255 ರೂ.ಗಳಷ್ಟಾಗಿದೆ.