ನವದೆಹಲಿ: ಶಿಕ್ಷಕರ ದೌರ್ಜನ್ಯಕ್ಕೆ ಮನನೊಂದು 10ನೇ ತರಗತಿ ವಿದ್ಯಾರ್ಥಿಯೊಬ್ಬ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ.
ರಾಷ್ಟ್ರ ರಾಜಧಾನಿಯ ಪ್ರಮುಖ ಶಾಲೆಯ ವಿದ್ಯಾರ್ಥಿ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಆತ್ಮಹತ್ಯೆ ಪತ್ರವನ್ನು ಬರೆದಿದ್ದು, ಅದರಲ್ಲಿ ಸಾವಿಗೆ ಶಿಕ್ಷಕರನೇ ಕಾರಣ ಎಂದು ದೂರಿದ್ದಾನೆ.
16 ವರ್ಷದ ಬಾಲಕನ ತಂದೆ ಪ್ರಕರಣ ದಾಖಲಿಸಿದ್ದು, ಮೂವರು ಶಿಕ್ಷಕರು ಮತ್ತು ಶಾಲೆಯ ಪ್ರಾಂಶುಪಾಲರು ತಮ್ಮ ಮಗನಿಗೆ ಮಾನಸಿಕ ಕಿರುಕುಳ ನೀಡಿರುವುದಾಗಿ ದೂರಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಬಾಲಕ ತನ್ನ ಆತ್ಮಹತ್ಯಾ ಪತ್ರದಲ್ಲಿ, "ಕ್ಷಮಿಸಿ ಮಮ್ಮಿ, ಆಪ್ಕಾ ಇತ್ನಿ ಬಾರ್ ದಿಲ್ ತೋಡಾ, ಅಬ್ ಲಾಸ್ಟ್ ಬಾರ್ ತೋಡುಂಗಾ. ಸ್ಕೂಲ್ ಕಿ ಟೀಚರ್ಸ್ ಅಬ್ ಹೈ ಹೈ ಐಸೆ, ಕ್ಯಾ ಬೋಲು (ಕ್ಷಮಿಸಿ ಮಮ್ಮಿ, ನಾನು ನಿಮ್ಮ ಹೃದಯವನ್ನು ಹಲವು ಬಾರಿ ಮುರಿದಿದ್ದೇನೆ ಮತ್ತು ನಾನು ಕೊನೆಯ ಬಾರಿಗೆ ಮಾಡುತ್ತಿದ್ದೇನೆ. ಶಾಲೆಯಲ್ಲಿ ಶಿಕ್ಷಕರು ಹೀಗಿದ್ದಾರೆ, ನಾನು ಏನು ಹೇಳುತ್ತೇನೆ?)" ಎಂದು ಬರೆದಿದ್ದಾನೆ.
ಬುಧವಾರ ಸಲ್ಲಿಸಿದ ಪ್ರಥಮ ಮಾಹಿತಿ ವರದಿಯಲ್ಲಿ, ಆತನ ತಂದೆ ಮಂಗಳವಾರ ಬೆಳಿಗ್ಗೆ 7.15 ಕ್ಕೆ ಎಂದಿನಂತೆ ತನ್ನ ಮಗ ಶಾಲೆಗೆ ಹೋಗಿದ್ದಾನೆ ಎಂದು ಹೇಳಿದ್ದಾರೆ.
ಮಧ್ಯ ದೆಹಲಿಯ ರಾಜೇಂದ್ರ ಪ್ಲೇಸ್ ಮೆಟ್ರೋ ನಿಲ್ದಾಣದ ಬಳಿ 16 ವರ್ಷದ ಬಾಲಕ ಗಾಯಗೊಂಡು ಮಲಗಿದ್ದಾನೆ ಎಂದು ಮಧ್ಯಾಹ್ನ 2.45 ರ ಸುಮಾರಿಗೆ ತಂದೆಗೆ ಕರೆ ಬಂದಿತು. ತನ್ನ ಮಗನನ್ನು ಬಿಎಲ್ ಕಪೂರ್ ಆಸ್ಪತ್ರೆಗೆ ಕರೆದೊಯ್ಯುವಂತೆ ತಂದೆ ಕರೆ ಮಾಡಿದವರನ್ನು ಕೇಳಿದರು ಮತ್ತು ಕುಟುಂಬವು ಅಲ್ಲಿಗೆ ತಲುಪಿದಾಗ, ಅವರು ಸಾವನ್ನಪ್ಪಿದ್ದಾರೆ ಎಂದು ಅವರಿಗೆ ತಿಳಿಸಲಾಯಿತು.