Select Your Language

Notifications

webdunia
webdunia
webdunia
webdunia

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

Children health

Krishnaveni K

ಬೆಂಗಳೂರು , ಶುಕ್ರವಾರ, 14 ನವೆಂಬರ್ 2025 (11:22 IST)
ಮಕ್ಕಳ ದಿನಾಚರಣೆಗೆ ಇನ್ನೇನು ಎರಡೇ ದಿನ ಬಾಕಿಯಿದೆ. ಆದರೆ ಆಧುನಿಕ ಜೀವನ ಶೈಲಿಯಲ್ಲಿ ಮಕ್ಕಳು ಸಂತೋಷ ಅನುಭವಿಸುವುದಕ್ಕಿಂತ ಹೆಚ್ಚು ಒತ್ತಡದಲ್ಲೇ ಕಾಲ ಕಳೆಯುತ್ತಿದ್ದಾರೆ. ನಿಮ್ಮ ಮಕ್ಕಳು ಹೀಗಿದ್ದರೆ ಅದನ್ನು ಖಂಡಿತಾ ಉದಾಸೀನ ಮಾಡಬೇಡಿ.

ಮಕ್ಕಳಿಗೆ ಪಾಠ, ಓದುವ ವಿಚಾರವೇ ಒತ್ತಡ ಮತ್ತು ಆತಂಕ ತರುತ್ತಿದೆ. ಇಂದಿನ ದಿನಗಳಲ್ಲಿ ಮಕ್ಕಳ ಬಾಲ್ಯದ ಸಂತೋಷವನ್ನು ಕಳೆಯುವ ಎರಡು ಸಾಧನಗಳೆಂದರೆ ಒಂದು ಮೊಬೈಲ್ ಇನ್ನೊಂದು ಅತಿಯಾದ ಪಾಠದ ಒತ್ತಡ. ಇದರಿಂದಾಗಿ ಮಕ್ಕಳು ಆತಂಕದ ಖಾಯಿಲೆಯಿಂದ ಬಳಲುತ್ತಿರುತ್ತಾರೆ. ಮಕ್ಕಳಲ್ಲಿ ಆತಂಕ (anxiety) ದ ಲಕ್ಷಣಗಳೇನು ಇಲ್ಲಿದೆ ನೋಡಿ ವಿವರ.

ಅತಿಯಾಗಿ ಯೋಚನೆ ಮಾಡುತ್ತಾ ಕೂರುವುದು: ನಿಮ್ಮ ಮಕ್ಕಳು ಯಾರೊಂದಿಗೂ ಬೆರೆಯದೇ ಯಾವುದೋ ಚಿಂತೆಯಲ್ಲಿ ಮುಳುಗಿದವರಂತಿದ್ದರೆ ಅವರು ಆತಂಕದಿಂದ ಬಳಲುತ್ತಿದ್ದಾರೆ ಎಂದರ್ಥ.

ಬೇಗ ಕೋಪಗೊಳ್ಳುವುದು: ಸಣ್ಣ ಪುಟ್ಟ ವಿಚಾರಗಳಿಗೂ ಬೇಗ ಕೋಪಗೊಳ್ಳುವುದು, ಮಾತನಾಡಿದರೆ ಕಿರಿ ಕಿರಿಯಾಗುವುದು ಇದರ ಲಕ್ಷಣಗಳು.

ಅವಾಯ್ಡ್ ಮಾಡುವುದು: ತನ್ನ ಸಹವರ್ತಿಗಳೊಂದಿಗೆ, ಸ್ನೇಹಿತರೊಂದಿಗೆ ಬೆರೆಯಲು ಹಿಂದೇಟು ಹಾಕುವುದು, ಆಟಗಳಲ್ಲಿ ತೊಡಗಿಸಿಕೊಳ್ಳುವುದು, ಯಾವುದಾದರೂ ಒಂದು ಸ್ಥಳಕ್ಕೆ ಭೇಟಿ ಕೊಡಲು ಹಿಂದೇಟು ಹಾಕುವುದು. ಒಟ್ಟಾರೆಯಾಗಿ ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯದೇ ಇರುವುದು.

ಏಕಾಗ್ರತೆ ಕೊರತೆ: ಪಾಠ ಅಥವಾ ಇನ್ನಿತರ ಚಟುವಟಿಕೆಗಳಲ್ಲಿ ಏಕಾಗ್ರತೆಯ ಕೊರತೆ, ಏನೋ ಚಡಪಡಿಕೆ, ಆರಾಮವಾಗಿ ಒಂದು ಕಡೆ ಕೂರಲಾಗದೇ ಒದ್ದಾಡುವುದು.

ಇತ್ಯಾದಿ ಲಕ್ಷಣಗಳು ಕಂಡುಬಂದರೆ ತಕ್ಷಣವೇ ನಿಮ್ಮ ಮಕ್ಕಳನ್ನು ಮುಜುಗರ ಪಡದೇ ಆಪ್ತ ಸಮಾಲೋಚಕರ ಬಳಿ ಕರೆದುಕೊಂಡು ಹೋಗಿ. ಅಥವಾ ಪೋಷಕರೇ ಮಕ್ಕಳ ಪಾಲಿಗೆ ಆಪ್ತ ಸಮಾಲೋಚಕರಂತೆ ಅವರ ಮಾನಸಿಕ ಸ್ಥಿತಿಯಿಂದ ಹೊರಗೆ ಕರೆತರಲು ಪ್ರಯತ್ನಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯ ವೃದ್ಧಿಗಾಗಿ ಶ್ರೀ ಸುದರ್ಶನ ಮಂತ್ರ ಇಲ್ಲಿದೆ