ಊಟ ಮಾಡುವಾಗ ಸಡನ್ ಆಗಿ ಬಿಕ್ಕಳಿಕೆ ಬಂದರೆ ಆಹಾರ ನುಂಗಲೂ ಅಲ್ಲ, ಉಗುಳಲೂ ಅಲ್ಲ ಎಂದು ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಇಲ್ಲಿದೆ ನೋಡಿ ಟಿಪ್ಸ್.
ಆತುರ ಆತುರವಾಗಿ ತಿನ್ನುವಾಗ ಅಥವಾ ಒಟ್ಟಿಗೇ ಹೆಚ್ಚು ತಿನ್ನುವಾಗ ಇಲ್ಲವೇ ಶಾಕಿಂಗ್ ವಿಚಾರ ಕೇಳಿದಾಗ ಇದ್ದಕ್ಕಿದ್ದಂತೆ ಬಿಕ್ಕಳಿಕೆ ಬಂದು ಉಸಿರು ಕಟ್ಟಿದಂತಾಗುತ್ತದೆ. ಕೆಲವೊಮ್ಮೆ ಇದು ವಿಪರೀತಕ್ಕೆ ಹೋಗುವುದೂ ಇದೆ. ಇಂತಹ ಸಂದರ್ಭದಲ್ಲಿ ಈ ಕೆಲವು ಟ್ರಿಕ್ಸ್ ಬಳಸಿ.
ಉಸಿರು ಬಿಗಿ ಹಿಡಿಯುವ ಟೆಕ್ನಿಕ್: ಸುದೀರ್ಘ ಉಸಿರು ತೆಗೆದುಕೊಂಡು 10 ರಿಂದ 20 ಸೆಕೆಂಡು ಉಸಿರು ಬಿಗಿದಿಟ್ಟುಕೊಳ್ಳಿ. ನಂತರ ನಿಧಾನವಾಗಿ ಉಸಿರು ತೆಗೆದುಕೊಳ್ಳಿ. ಈ ರೀತಿ ಎರಡು ಮೂರು ಸಲ ಮಾಡಿ. ಇದರಿಂದ ರಕ್ತದಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಯಾಗಿ ರಿಲ್ಯಾಕ್ಸ್ ಆಗುತ್ತೀರಿ.
ಐಸ್ ವಾಟರ್ ಸೇವಿಸಿ: ಬಿಕ್ಕಳಿಕೆ ಬಂದಾಗ ಐಸ್ ವಾಟರ್ ನ್ನು ಸ್ವಲ್ಪ ಸ್ವಲ್ಪವೇ ಸೇವನೆ ಮಾಡಿ. ಶೀತ ತಾಪಮಾನ ನರಗಳ ಸಿಗ್ನಲ್ ಮಧ್ಯೆ ಪ್ರವೇಶಿಸಿ ಉಪಶಮನ ಕೊಡುತ್ತದೆ.
ಹುಳಿ ಪದಾರ್ಥ ಸೇವಿಸಿ: ತಕ್ಷಣವೇ ಹುಳಿ ಹುಳಿಯಾಗಿರುವ ಯಾವುದಾದರೂ ವಸ್ತು ಸೇವನೆ ಮಾಡಿ. ಸ್ವಲ್ಪ ವಿನೇಗರ್ ಅಥವಾ ನಿಂಬೆ ರಸ ನಾಲಿಗೆಗೆ ಸೋಕಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ.
ಆದಷ್ಟು ಆಹಾರ ಸೇವನೆ ಮಾಡುವಾಗ ನಿಧಾನವಾಗಿ ಜಗಿದು ತಿನ್ನುವ ಅಭ್ಯಾಸ ಮಾಡಿ. ಇದರಿಂದ ಕೆಮ್ಮು ಇಲ್ಲವೇ ಬಿಕ್ಕಳಿಕೆ ಬರುವ ಸಾಧ್ಯತೆಯಿಲ್ಲ.