ಚಳಿಗಾಲದಲ್ಲಿ ಮೂಗು ಕಟ್ಟುತ್ತಿದ್ದರೆ ರಾತ್ರಿ ಮಲಗುವುದೂ ಸಮಸ್ಯೆಯಾಗುತ್ತದೆ. ಚಳಿಗಾಲದಲ್ಲಿ ಬರುವ ಈ ಸಮಸ್ಯೆಗೆ ಏನು ಪರಿಹಾರ? ಇಲ್ಲಿದೆ ನೋಡಿ ಟ್ರಿಕ್ಸ್.
ಚಳಿಗಾಲದಲ್ಲಿ ಶೀತ ಗಾಳಿಯಿಂದಾಗಿ ರಾತ್ರಿ ವೇಳೆ ಮೂಗು ಕಟ್ಟಿದಂತಾಗಿ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಇದರಿಂದ ಸರಾಗವಾಗಿ ಉಸಿರಾಟ ಸಾಧ್ಯವಾಗದೇ ನಿದ್ರೆಗೆ ಭಂಗವಾಗುತ್ತದೆ. ಜೊತೆಗೆ ಆಗಾಗ ಕಾಡುವ ಶೀತದ ಸಮಸ್ಯೆಗೆ ಇಲ್ಲಿದೆ ಪರಿಹಾರ.
ಬಿಸಿ ಶಾಖ ಕೊಡಿ: ಒಂದು ಶುದ್ಧ ಬಟ್ಟೆಯನ್ನು ಬಿಸಿ ನೀರನಲ್ಲಿ ಅದ್ದಿ ಮೂಗು, ಹಣೆಗೆ ಸುಮಾರು 10-15 ನಿಮಿಷ ಶಾಖ ಕೊಡಿ. ಇದರಿಂದ ಮೂಗಿನ ಮಾಂಸಖಂಡಗಳು ಸಡಿಲವಾಗಿ ಉಸಿರಾಟ ಸಡಿಲವಾಗುವುದಲ್ಲದೆ, ಕಫ ಇದ್ದರೂ ಕರಗುತ್ತದೆ.
ಜೇನು ತುಪ್ಪ, ನಿಂಬೆರಸ ಪಾನಿಯ: ಚಳಿಗಾಲದಲ್ಲಿ ಪ್ರತಿನಿತ್ಯ ನಿಂಬೆ ರಸ ಮತ್ತು ಜೇನು ತುಪ್ಪ ಹಾಕಿದ ಬಿಸಿ ನೀರಿನ ಸೇವನೆ ಮಾಡಿ. ಇದರಿಂದ ಬ್ಲಾಕ್ ಗಳೆಲ್ಲವೂ ನಿವಾರಣೆಯಾಗುತ್ತವೆ.
ವಿಶೇಷವಾಗಿ ದೇಹವನ್ನು ಸದಾ ಹೈಡ್ರೇಟ್ ಮಾಡುತ್ತಿರಬೇಕು. ಆಗಾಗ ಬಿಸಿ ನೀರು ಸೇವನೆ ಮಾಡುತ್ತಿರಿ. ಇದಲ್ಲೆ ಹಳೆಯ ಪದ್ಧತಿ ಸ್ಟೀಮ್ ಮಾಡೋದು ಇದ್ದೇ ಇದೆಯಲ್ಲಾ. ತಪ್ಪದೇ ಮಾಡುತ್ತಿರಿ.