ದೇಹಕ್ಕೆ ನೀರಿನಂಶ ಬೇಕು ನಿಜ. ಆದರೆ ಅತಿಯಾದ್ರೆ ಅಮೃತವೂ ವಿಷ ಅಂತಾರಲ್ಲ. ಹಾಗೆಯೇ ನೀರಿನಂಶ ಹೆಚ್ಚಾದರೂ ದೇಹದ ಮೇಲೆ ಭಾರೀ ಪರಿಣಾಮ ಬೀರುತ್ತದೆ. ನೀರಿನಂಶ ಹೆಚ್ಚಾದ್ರೆ ಏನು ಸಮಸ್ಯೆಯಾಗುತ್ತದೆ ನೋಡಿ.
ಅತಿಯಾಗಿ ನೀರು ಸೇವನೆ ಮಾಡಿದಲ್ಲಿ ಕಿಡ್ನಿಗೆ ಅದು ಸಂಸ್ಕರಿಸಲು ಕಷ್ಟವಾಗಬಹುದು. ಇದರಿಂದ ದೇಹದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗಬಹುದು.
ಮೆದುಳಿಗೂ ಹಾನಿ: ಅತಿಯಾದ ನೀರು ಸೇವನೆ ಮೆದುಳಿನ ಮೇಲೂ ಪರಿಣಾಮ ಬೀರಬಹುದು. ಇದರಿಂದಾಗಿ ತಲೆನೋವು, ಯೋಚನೆಗಳಲ್ಲಿ ಗೊಂದಲ, ಮಾನಸಿಕ ಕಿರಿ ಕಿರಿ ಆಗಬಹುದು. ಸಮಸ್ಯೆ ಗಂಭೀರವಾದರೆ ನರಗಳ ಮೇಲೆ ಪರಿಣಾಮ ಬೀರಿ ಮಾರಣಾಂತಿಕವಾಗಬಹುದು.
ಇದಲ್ಲದೆ ವಾಕರಿಕೆ, ತಲೆಸುತ್ತಿದಂತಾಗುವುದು, ಮಾಂಸಖಂಡಗಳು ಹಿಡಿದಿಟ್ಟಂತಾಗುವುದು, ಸುಸ್ತು, ಪದೇ ಪದೇ ಮೂತ್ರಿಸಬೇಕೆನಿಸುವುದು, ಕೈ, ಕಾಲುಗಳಲ್ಲಿ ಊತ ಇತ್ಯಾದಿ ಸಮಸ್ಯೆಗಳು ಕಂಡುಬರಬಹುದು.