ರಾತ್ರಿ ವೇಳೆ ನಾವು ಸೇವಿಸುವ ಕೆಲವೊಂದು ಆಹಾರದಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಅಥವಾ ಅಸಿಡಿಟಿ ಸಮಸ್ಯೆ ತಂದೊಡ್ಡಬಹುದು. ಹಾಗಿದ್ದರೆ ರಾತ್ರಿ ವೇಳೆ ಏನು ಸೇವಿಸಬಾರದು ಇಲ್ಲಿದೆ ನೋಡಿ ವಿವರ.
ಅಸಿಡಿಟಿ ಅಥವಾ ಹೊಟ್ಟೆಯ ಬಹುತೇಕ ಸಮಸ್ಯೆಗಳಿಗೆ ಕಾರಣ ನಾವು ಸೇವಿಸುವ ಆಹಾರ. ಅದರಲ್ಲೂ ರಾತ್ರಿ ವೇಳೆ ಹಿತ, ಮಿತವಾದ ಮತ್ತು ಆರೋಗ್ಯಕರವಾದ ಆಹಾರ ಸೇವಿಸುವುದು ಮುಖ್ಯ. ಯಾಕೆಂದರೆ ರಾತ್ರಿ ದೈಹಿಕ ಚಟುವಟಿಕೆ ಕಡಿಮೆ. ಹೀಗಾಗಿ ಲೈಟ್ ಫುಡ್ ಒಳ್ಳೆಯದು.
ಕರಿದ ತಿಂಡಿ: ಕೆಲವರಿಗೆ ರಾತ್ರಿ ಊಟಕ್ಕೆ ಕರಿದ ತಿಂಡಿ ಸೇವನೆ ಮಾಡುವ ಅಭ್ಯಾಸವಿರುತ್ತದೆ. ಕೊಬ್ಬಿನಂಶ ಅಧಿಕವಾಗಿರುವ ಮಾಂಸಾಹಾರ, ಕರಿದ ತಿಂಡಿಗಳ ಸೇವನೆ ರಾತ್ರಿ ಮಾಡುವುದರಿಂದ ಅಸಿಡಿಟಿಗೆ ಕಾರಣವಾದೀತು.
ಖಾರದ ತಿಂಡಿಗಳು: ನಾಲಿಗೆಗೆ ರುಚಿ ಎಂದು ಖಾರದ ತಿಂಡಿಗಳ ಸೇವನೆ ಮಾಡಿ ಮಲಗಿದರೆ ರಾತ್ರಿಯಿಡೀ ಹೊಟ್ಟೆ ಹಿಡಿದುಕೊಂಡು ಕೂರಬೇಕಾದೀತು.
ಫಾಸ್ಟ್ ಫುಡ್: ಫಾಸ್ಟ್ ಫುಡ್ ಗಳು ತಿನ್ನಲು ಬಲು ರುಚಿ. ಆದರೆ ಇದನ್ನು ರಾತ್ರಿ ವೇಳೆ ಸೇವನೆ ಮಾಡುವುದರಿಂದ ಹೊಟ್ಟೆ ಉರಿ, ಕಿರಿ ಕಿರಿ ಉಂಟಾಗಬಹುದು.
ಇಂತಹ ಆಹಾರ ಜೀರ್ಣವಾಗಬೇಕಾದರೆ ಹೆಚ್ಚು ಹೊಟ್ಟೆ ಆಸಿಡ್ ಬೇಕಾಗುತ್ತದೆ. ಆದರೆ ಆ ಸಂದರ್ಭದಲ್ಲಿ ದೇಹಕ್ಕೆ ಚಟುವಟಿಕೆ ಕಡಿಮೆಯಾಗುವುದರಿಂದ ಜೀರ್ಣದ ಸಮಸ್ಯೆಯಾಗುವುದು ಸಹಜ.