Select Your Language

Notifications

webdunia
webdunia
webdunia
webdunia

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

Children brain

Krishnaveni K

ಬೆಂಗಳೂರು , ಮಂಗಳವಾರ, 18 ನವೆಂಬರ್ 2025 (11:47 IST)
Photo Credit: X
ಇಂದಿನ ಜಗತ್ತಿನಲ್ಲಿ ದೊಡ್ಡವರಂತೇ ಮಕ್ಕಳೂ ಒತ್ತಡದ ಜೀವನ ನಡೆಸುತ್ತಿದ್ದಾರೆ. ಇದರಿಂದ ಅವರ ಬಾಲ್ಯದ ಸಂತೋಷವೇ ಇಲ್ಲವಾಗಿದೆ. ಮಕ್ಕಳು ಒತ್ತಡದಿಂದ ಬಳಲುತ್ತಿದ್ದರೆ ಅದರಿಂದ ಹೊರತರಲು ಏನು ಮಾಡಬೇಕು ಇಲ್ಲಿದೆ ನೋಡಿ ಟಿಪ್ಸ್.

ಈ ಚಟುವಟಿಕೆ ಮಾಡಿಸಿ: ಮಕ್ಕಳು ಹೆಚ್ಚು ಒತ್ತಡಕ್ಕೊಳಗಾಗುವುದು ಓದುವ ವಿಚಾರದಲ್ಲಿ. ಹೀಗಾಗಿ ಎಲ್ಲದಕ್ಕೂ ಒಂದು ಟೈಂ ಟೇಬಲ್ ಸೆಟ್ ಮಾಡಿ. ಉದಾಹರಣೆಗೆ ಓದುವುದು, ಆಡುವುದು, ಟಿವಿ ಅಥವಾ ಮೊಬೈಲ್ ವೀಕ್ಷಣೆಗೆ, ಮಲಗಲು ಎಲ್ಲದಕ್ಕೂ ನಿಗದಿತ ಸಮಯ ಫಿಕ್ಸ್ ಮಾಡಿ.

ಕ್ವಾಲಿಟಿ ಟೈಂ ಕಳೆಯಿರಿ: ದಿನಕ್ಕೆ 10 ನಿಮಿಷವಾದರೂ ಸರಿ, ನಿಮ್ಮ ಮಕ್ಕಳೊಂದಿಗೆ ಕ್ವಾಲಿಟಿ ಟೈಂ ಕಳೆಯಿರಿ. ಆ ಸಮಯದಲ್ಲಿ ಆಟವಾಡಲೇಬೇಕೆಂದೇನಿಲ್ಲ. ಆದರೆ ಅವರ ಜೊತೆಗೆ ಕೆಲವು ಹೊತ್ತು ದಿನ ಹೇಗಾಯ್ತು ಎನ್ನುವುದರ ಬಗ್ಗೆ ಸ್ನೇಹಿತನಂತೆ ಮಾತನಾಡಿ.

ಪ್ರೀತಿ ಕೊಡಿ ಇದುವೇ ಮುಖ್ಯ: ಮಕ್ಕಳು ಆಗಾತ ತಂದೆ-ತಾಯಿಯ ಪ್ರೀತಿಯ ಸ್ಪರ್ಶ ಬಯಸುತ್ತಾರೆ. ಅವರು ಬೇಸರದಲ್ಲಿದ್ದಾಗ ಅಥವಾ ಸಂತೋಷದಲ್ಲಿದ್ದಾಗ ನಿಮ್ಮ ಒಂದು ಅಪ್ಪುಗೆ ಅಥವಾ ಬೆನ್ನು ತಟ್ಟುವ ಮೂಲಕ ನೀವು ಅವರ ಜೊತೆಗಿದ್ದೀರಿ ಎಂಬ ಮಾನಸಿಕ ಬೆಂಬಲ ಕೊಡಿ.

ಮಕ್ಕಳು ನಿಮ್ಮನ್ನೇ ಕಾಪಿ ಮಾಡ್ತಾರೆ: ನಿಮ್ಮ ಹವ್ಯಾಸಗಳು, ವರ್ತನೆಗಳು ಮಕ್ಕಳ ಮೇಲೂ ಪರಿಣಾಮ ಬೀರುತ್ತದೆ. ಅವರೂ ಅದನ್ನೇ ಕಾಪಿ ಮಾಡುತ್ತಾರೆ. ನೀವು ಸದಾ ಬೇಸರದಿಂದ ಅಥವಾ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತೆ ಇದ್ದರೆ ಅವರೂ ಅದೇ ಮೂಡ್ ನಲ್ಲಿರುತ್ತಾರೆ. ಅದರ ಬದಲು ಮನೆಯಲ್ಲಿ ನಗು ತುಂಬಿರಲಿ, ಹಾಡು, ಡ್ಯಾನ್ಸ್, ಅಂತಿಲ್ಲದೇ ಇದ್ದರೂ ಮನೆಯವರೆಲ್ಲರ ಜೊತೆ ಕೂತು ಹರಟುವ, ತಮಾಷೆ ಮಾಡುವ ಅಭ್ಯಾಸ ನಿಮ್ಮದಾಗಿರಲಿ. ಆಗ ಮಕ್ಕಳೂ ಅದನ್ನು ಕಾಪಿ ಮಾಡುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ