ಬೆಂಗಳೂರು: ಜೀವನ ಶೈಲಿಯಲ್ಲಿ ಬದಲಾವಣೆಯಾಗುತ್ತಿದ್ದ ಹಾಗೇ ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀಳುತ್ತಾ ಹೋಗುತ್ತದೆ.
ಪ್ರಸ್ತುತ ಕಾಲಘಟ್ಟದಲ್ಲಿ ಹೆಚ್ಚಾಗಿ ಎಲ್ಲರೂ ಮೊಬೈಲ್‌ಗೆ ಜೋತು ಬೀಳುತ್ತಿರುವುದರಿಂದ ಇದು ನಮ್ಮ ನಿದ್ದೆ ಮೇಲೆ ಪರಿಣಾಮ ಬೀಳುತ್ತದೆ. ಒಬ್ಬ ಮನುಷ್ಯನಿಗೆ 7 ರಿಂದ 8 ಗಂಟೆ ನಿದ್ದೆಯಾಗದಿದ್ದರೆ ಆತನ ಆರೋಗ್ಯದಲ್ಲಿ ಭಾರೀ ಪರಿಣಾಮ ಬೀರುತ್ತದೆ. ನಿದ್ದೆ ಕಡಿಮೆಯಾದಾಗ ಸಾಮಾನ್ಯವಾಗಿ ತಲೆನೋವು ಹಾಗೂ ತಲೆಸುತ್ತು ಶುರುವಾಗುತ್ತದೆ.
ಹೀಗಿರುವಾಗ ಪ್ರತಿ ದಿನ ನಿದ್ದೆಯನ್ನು ಸರಿಯಾದ ಸಮಯಕ್ಕೆ ಮಾಡಬೇಕು. ಒಂದು ವೇಳೆ ರಾತ್ರಿ ವೇಳೆ ನಿದ್ದೆ ಬಾರದಿದ್ದರೆ ನಿಮ್ಮ ಮೊಬೈಲ್ ಅನ್ನು ದೂರವಿಟ್ಟು ಮಲಗುವ ಅಭ್ಯಾಸವನ್ನು ಮಾಡಿಕೊಳ್ಳಿ. ಈ ಅಭ್ಯಾಸವನ್ನು ದಿನನಿತ್ಯ ಮಾಡಿ, ಹೀಗೇ ಮಾಡಿದ್ದಲ್ಲಿ ಕ್ರಮೇಣ ನಿದ್ದೆ ಹೊತ್ತಿಗೆ ಬೀಳುತ್ತದೆ.
ಮೊಬೈಲ್ ಫೋನ್‌ಗಳಿಂದ ಬರುವ ನೀಲಿ ಬೆಳಕು ನಿದ್ರೆಯನ್ನು ಪ್ರಚೋದಿಸುವ ಹಾರ್ಮೋನುಗಳ ಸಮತೋಲನವನ್ನು ಸಹ ಅಡ್ಡಿಪಡಿಸುತ್ತದೆ. ಇದು ನಿದ್ರೆಗೆ ತೊಂದರೆ ಉಂಟುಮಾಡುತ್ತದೆ ಎಂದು ಹೇಳಿದೆ.