Select Your Language

Notifications

webdunia
webdunia
webdunia
webdunia

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

Periods

Krishnaveni K

ಬೆಂಗಳೂರು , ಸೋಮವಾರ, 17 ನವೆಂಬರ್ 2025 (11:06 IST)
ಸಾಮಾನ್ಯವಾಗಿ ಮಹಿಳೆಯರು ಋತುಚಕ್ರದ ಮೊದಲ ದಿನ ಹೊಟ್ಟೆ ನೋವಿನಿಂದ ಬಳಲುತ್ತಾರೆ. ಈ ರೀತಿ ಹೊಟ್ಟೆ ನೋವಿದ್ದಾಗ ದಿಡೀರ್ ಪರಿಹಾರ ಕಂಡುಕೊಳ್ಳಬೇಕೆಂದರೆ ಏನು ಮಾಡಬಹುದು ಇಲ್ಲಿದೆ ನೋಡಿ ಟಿಪ್ಸ್.

ಬಿಸಿ ನೀರಿನ ಸ್ನಾನ ಮಾಡಿ: ಮೈ ಕೈ ನೋವಿದ್ದಾಗ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಹಾಯ್ ಎನಿಸುತ್ತದೆ. ಅದೇ ರೀತಿ ಋತುಚಕ್ರದ ನೋವಿನ ಸಂದರ್ಭದಲ್ಲಿಯೂ ಬಿಸಿ ನೀರಿನಲ್ಲಿ ಸ್ನಾನ ಮಾಡಿ.

ಹಾಟ್ ಬ್ಯಾಗ್ ಮಸಾಜ್: ಹೊಟ್ಟೆಯ ಭಾಗಕ್ಕೆ ಹಾಟ್ ಬ್ಯಾಗ್ ಇಟ್ಟು ಹೆಚ್ಚು ಒತ್ತಡ ಹಾಕದೇ ಹಗುರವಾಗಿ ಮಸಾಜ್ ಮಾಡಿ.

ಯೋಗ: ಬಾಲಾಸನದಂತಹ ಸರಳ ಆಸನವನ್ನು ಮಾಡುವ ಮೂಲಕ ದೇಹಕ್ಕೆ ಲಘು ಚಟುವಟಿಕೆ ಕೊಡಿ. ಇದರಿಂದ ನೋವು ಉಪಶಮನವಾಗುವುದು.

ನೀರಿನಂಶ ಸೇವಿಸಬೇಕು: ಹರ್ಬಲ್ ಚಹಾ ಅಥವಾ ಸಾಕಷ್ಟು ಪ್ರಮಾಣದಲ್ಲಿ ಶುದ್ಧ ನೀರಿನ ಸೇವನೆ ಮಾಡಿ ದೇಹ ನಿರ್ಜಲೀಕರಣಕ್ಕೊಳಗಾಗದಂತೆ ನೋಡಿಕೊಳ್ಳಿ.

ಕೆಳ ಹೊಟ್ಟೆ ಮಸಾಜ್: ಕೆಳ ಹೊಟ್ಟೆಯ ಭಾಗ ಹೆಚ್ಚು ನೋಯುತ್ತದೆ. ಹೀಗಾಗಿ ಈ ಭಾಗವನ್ನು ಹಗುರವಾಗಿ ಮಸಾಜ್ ಮಾಡಿ ರಿಲೀಫ್ ಸಿಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ