ಇತ್ತೀಚೆಗಿನ ದಿನಗಳಲ್ಲಿ ರಕ್ತದೊತ್ತಡ ಅಥವಾ ಬಿಪಿ ಎನ್ನುವುದು ಸರ್ವೇ ಸಾಮಾನ್ಯವಾಗಿದೆ. ಹಾಗಂತ ಇದನ್ನು ನಿರ್ಲ್ಯಕ್ಷ ಮಾಡುವಂತಿಲ್ಲ. ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಪ್ರಕಾರ ಬಿಪಿ ಇರುವವರು ಇದೊಂದು ತಪ್ಪು ಮಾಡಬಾರದು.
ಕೆಲವರಿಗೆ ಯಾವುದೋ ರೋಗಕ್ಕೆಂದು ವೈದ್ಯರ ಬಳಿ ಹೋದಾಗ ರಕ್ತದೊತ್ತಡ ಪರೀಕ್ಷೆ ನಡೆಸಿದಾಗಲೇ ರಕ್ತದೊತ್ತಡವಿದೆ ಎನ್ನುವುದು ಗೊತ್ತಾಗುತ್ತದೆ. ಕೆಲವರಲ್ಲಿ ಅದರ ಲಕ್ಷಣವೂ ಕಂಡುಬರುವುದಿಲ್ಲ. ಆದರೆ 30 ವರ್ಷ ವಯಸ್ಸು ದಾಟಿದ ಮೇಲೆ ಆಗಾಗ ಬಿಪಿ ಚೆಕ್ ಮಾಡುತ್ತಿರಬೇಕು.
ಡಾ ಸಿಎನ್ ಮಂಜುನಾಥ್ ಪ್ರಕಾರ ಬಹುತೇಕರು ಮಾಡುವ ತಪ್ಪು ಇದೇ. ಒಮ್ಮೆ ರಕ್ತದೊತ್ತಡ ಕಾಣಿಸಿಕೊಂಡಿತೆಂದು ಗುಳಿಗೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ನಂತರ ಔಷಧಿ ತೆಗೆದುಕೊಳ್ಳುವುದನ್ನೇ ಬಿಡುತ್ತಾರೆ. ಏನಾಗುತ್ತದೆ ನೋಡೋಣ ಎಂಬ ಯೋಚನೆ ಅವರದ್ದು.
ಆದರೆ ಇದು ತುಂಬಾ ತಪ್ಪು. ಒಮ್ಮೆ ರಕ್ತದೊತ್ತಡ ಕಾಣಿಸಿಕೊಂಡರೆ ವೈದ್ಯರ ಸಲಹೆ ತೆಗೆದುಕೊಳ್ಳದೇ ನೀವಾಗಿಯೇ ಔಷಧಿ ಬಿಡುವುದು ತಪ್ಪು. ಇದರಿಂದ ನೀವು ಮುಂದೆ ಗಂಭೀರ ಸಮಸ್ಯೆಗೆ ತುತ್ತಾಗಬೇಕಾದೀತು. ಕೆಲವೊಮ್ಮೆ ಪಾರ್ಶ್ವವಾಯುನಂತಹ ಗಂಭೀರ ಸಮಸ್ಯೆಯೂ ಎದುರಾಗಬಹುದು. ಹೀಗಾಗಿ ರಕ್ತದೊತ್ತಡವಿದ್ದರೆ ನಿಯಮಿತವಾಗಿ ಗುಳಿಗೆ ತೆಗೆದುಕೊಳ್ಳುವುದು ಮುಖ್ಯ ಎಂದು ಅವರು ಸಂವಾದವೊಂದರಲ್ಲಿ ಹೇಳಿದ್ದರು.