ಬೆಂಗಳೂರು: ಉದ್ದಿನ ದೋಸೆ ತಿಂದು ಬೇಜಾರಾಗಿದ್ದರೆ ಅದೇ ರೀತಿ ಮೆಂತ್ಯೆ ಕಾಳಿನಿಂದ ಮಾಡಿದ ದೋಸೆಯನ್ನು ಸವಿಯಬಹುದು. ಇದು ತಿನ್ನಲು ರುಚಿಯಾಗಿದ್ದು, ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.
ಬೇಕಾಗುವ ಸಾಮಾಗ್ರಿಗಳು.
ದೋಸೆ ಅಕ್ಕಿ 1 ಲೋಟ
ಮೆಂತ್ಯೆ 1 1/2 ಚಮಚ
ಅವಲಕ್ಕಿ ಸ್ವಲ್ಪ
ರುಚಿಗೆ ಉಪ್ಪು
ದೋಸೆ ಅಕ್ಕಿ ಹಾಗೂ ಮೆಂತ್ಯೆಯನ್ನು 3ರಿಂದ ನಾಲ್ಕು ಗಂಟೆ ನೆನೆಸಿಡಿ. ನಂತರ ಅದಕ್ಕೆ ನೀರಿನಲ್ಲಿ ತೊಳೆದ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ರುಬ್ಬಿ. ಈ ಮಿಶ್ರಣವನ್ನು 8 ಗಂಟೆಗಳ ಕಾಲ ಬಿಡಿ. ದೋಸೆ ಮಾಡುವಾಗ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಚಟ್ನಿ ಜತೆಗೆ ಈ ದೋಸೆ ಸವಿಯಲು ತುಂಬಾನೇ ಚೆನ್ನಾಗಿರುತ್ತದೆ. ಆರೋಗ್ಯಕ್ಕೂ ತುಂಬಾನೇ ಉತ್ತಮ.