ಬೆಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ಪ್ರಮುಖ ಘಟ್ಟಕ್ಕೆ ತಲುಪಿದ್ದು ಇದೀಗ ಸರ್ಕಾರಕ್ಕೂ ವಿಶೇಷ ತನಿಖಾ ತಂಡ (ಎಸ್ಐಟಿ) ವರದಿ ನೀಡಲಿದೆ.
ಈ ಸಂಬಂಧ ಗೃಹ ಸಚಿವ ಜಿ ಪರಮೇಶ್ವರ ಅವರು ಪ್ರತಿಕ್ರಿಯಿಸಿ, ಬೆಳಗಾವಿ ಅಧಿವೇಶನದಲ್ಲಿ ವರದಿಯಲ್ಲಿನ ಅಂಶಗಳನ್ನು ತಿಳಿಸುತ್ತೇನೆಂದರು.
ಧರ್ಮಸ್ಥಳ ಬುರುಡೆ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಿದ್ದಾರೆ. ಅದರಲ್ಲಿ ಏನಿದೆ, ಸತ್ಯ ಏನು ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.
ಎಸ್‌ಐಟಿಯನ್ನು ಸರ್ಕಾರವೇ ರಚಿಸಿರುವುದರಿಂದಾಗಿ ಅವರು ಸರ್ಕಾರಕ್ಕೂ ವರದಿಯನ್ನು ಒಪ್ಪಿಸುತ್ತಾರೆ. ಬಳಿಕ ಈ ಪ್ರಕರಣದಲ್ಲಿ ಏನು ಷಡ್ಯಂತ್ರ ನಡೆದಿದೆ ಎಂಬ ಅಂಶಗಳು ಬಹಿರಂಗವಾಗಲಿದೆ ಎಂದರು.