ಟೋಕಿಯೊ: ವಿಶ್ವ ಅಥ್ಲೆಟಿಕ್ಸ್‌ನ ಪುರುಷರ ವಿಭಾಗದ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಚಾಂಪಿಯನ್ ನೀರಜ್ ಚೋಪ್ರಾ ಎಂಟಬೇ ಸ್ಥಾನ ಪಡೆಯುವ ಮೂಲಕ ಎರಡನೇ ಬಾರಿ ವಿಶ್ವ ಚಾಂಪಿಯನ್ ಕಿರೀಟ ಧರಿಸುವ ಕನಸು ಗುರುವಾರ ಭಗ್ನವಾಯಿತು.
ಇನ್ನೂ ಭಾರತದವರೇ ಆಗಿರುವ ಯುಟ ಅಥ್ಲೀಟ್ ಸಚಿನ್ ಯಾದವ್ ನಾಲ್ಕನೇ ಸ್ಥಾನ ಪಡೆದರು.
ಟ್ರಿನಿಡಾಡ್ ಮತ್ತು ಟೊಬ್ಯಾಗೋದ ಕೆಶ್ರಾನ್ ವಾಲ್ಕಾಟ್ (88.16ಮೀ) ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಗ್ರೆನೆಡಾದ ಆ್ಯಂಡರ್ಸನ್ ಪೀಟರ್ (87.38ಮೀ) ಮತ್ತು ಕರ್ಟೀಸ್ ಥಾಂಪ್ಸನ್ (86.67ಮೀ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡರು.
2021ರಲ್ಲಿ ನೀರಜ್ ಚೋಪ್ರಾ ಅವರು ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಕ್ರೀಡಾಂಗಣದಲ್ಲಿ ಇಂದು ತಮ್ಮ ವೈಯಕ್ತಿಕ ಶ್ರೇಷ್ಠ ಥ್ರೋ ದಾಖಲಿಸಲು ಕೂಡ ಆಗಲಿಲ್ಲ. ಅವರಿಂದ 84.03 ಮೀ ದೂರ ಥ್ರೋ ಮಾಡಲಷ್ಟೇ ಸಾಧ್ಯವಾಯಿತು.