Select Your Language

Notifications

webdunia
webdunia
webdunia
webdunia

ನೀರಜ್‌ ಚೋಪ್ರಾ ಹೊಸ ಮೈಲಿಗಲ್ಲು: ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಅಭಿನಂದನೆಗಳ ಮಹಾಪೂರ

Javelin star Neeraj Chopra, Doha Diamond League team, Prime Minister Narendra Modi

Sampriya

ನವದೆಹಲಿ , ಶನಿವಾರ, 17 ಮೇ 2025 (14:24 IST)
Photo Courtesy X
ನವದೆಹಲಿ: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ಡೈಮಂಡ್‌ ಲೀಗ್‌ ಕೂಟದಲ್ಲಿ 90 ಮೀಟರ್‌ ಗಡಿ ದಾಟಿ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

ದೋಹಾದಲ್ಲಿ ಶುಕ್ರವಾರ ರಾತ್ರಿ ನಡೆದ ಡೈಮಂಡ್‌ ಲೀಗ್‌ ಕೂಟದಲ್ಲಿ ಜಾವೆಲಿನ್‌ ಅನ್ನು 90.23 ಮೀಟರ್‌ ದೂರ ಎಸೆದು, ವೈಯಕ್ತಿಕ ಶ್ರೇಷ್ಠ ಸಾಧನೆ ಪ್ರದರ್ಶಿಸಿದರು. 27 ವರ್ಷ ವಯಸ್ಸಿನ ನೀರಜ್‌ ಇದೇ ಮೊದಲ ಬಾರಿ 90 ಮೀಟರ್‌ ಮೈಲಿಗಲ್ಲು ದಾಟಿದರು. ಈ ಸಾಧನೆ ಮಾಡಿದ ವಿಶ್ವದ 25ನೇ ಮತ್ತು ಏಷ್ಯಾದ ಮೂರನೇ ಅಥ್ಲೀಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಚೋಪ್ರಾ ಸಾಧನೆಗೆ ನಾಡಿನ ಗಣ್ಯರು ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಇವರಲ್ಲಿ ಕ್ರೀಡಾಪಟುಗಳು, ರಾಜಕೀಯ ನಾಯಕರು, ಸಿನಿಮಾ ತಾರೆಯರು, ಉದ್ಯಮಿಗಳು ಸೇರಿದಂತೆ ಅಭಿಮಾನಿಗಳು ಅಭಿನಂದಿಸಿದ್ದಾರೆ.

ಡೈಮಂಡ್‌ ಲೀಗ್‌ ಕೂಟದಲ್ಲಿ ಜಾವೆಲಿನ್‌ ಅನ್ನು 90.23 ಮೀಟರ್‌ ದೂರ ಎಸೆದು, ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿರುವ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ಇದು ಅವರ ನಿರಂತರ ಸಮರ್ಪಣೆ, ಶಿಸ್ತು ಮತ್ತು ಉತ್ಸಾಹದ ಫಲಿತಾಂಶವಾಗಿದೆ. ಅವರ ಸಾಧನೆಗೆ ದೇಶ ಹೆಮ್ಮೆಪಡುತ್ತದೆ ಎಂದು ಮೋದಿ ಹೇಳಿದ್ದಾರೆ.

ದೋಹಾದ ಸುಹೀಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ಏರಿಳಿತ ಕಂಡ ಪುರುಷರ ಜಾವೆಲಿನ್‌ ಸ್ಪರ್ಧೆಯಲ್ಲಿ 91.06 ಮೀಟರ್‌ ಸಾಧನೆಯೊಂದಿಗೆ ಜರ್ಮನಿಯ ಜೂಲಿಯನ್ ವೆಬರ್‌ ಅಗ್ರಸ್ಥಾನ ಪಡೆದರು. ವೆಬರ್ ಅವರ ಕೊನೆಯ ಪ್ರಯತ್ನಕ್ಕೂ ಮುನ್ನ ಮುನ್ನಡೆ ಕಾಯ್ದುಕೊಂಡಿದ್ದ ನೀರಜ್‌ ಅಂತಿಮವಾಗಿ ಎರಡನೇ ಸ್ಥಾನ ಗಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

Rohit Sharma: ಆ ಸ್ಟ್ಯಾಂಡ್ ಗೇ ಸಿಕ್ಸರ್ ಹೊಡಿ ಎಂದ ರವಿಶಾಸ್ತ್ರಿ: ರೋಹಿತ್ ಶರ್ಮಾ ಉತ್ತರ ವಿಡಿಯೋ ನೋಡಿ