ಮುಂಬೈ: ವಾಂಖೆಡೆ ಮೈದಾನದಲ್ಲಿ ರೋಹಿತ್ ಶರ್ಮಾ ಹೆಸರಿನ ಸ್ಟ್ಯಾಂಡ್ ಉದ್ಘಾಟನೆಯಾಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರವಿಶಾಸ್ತ್ರಿ ಅದೇ ಸ್ಟ್ಯಾಂಡ್ ಗೆ ಸಿಕ್ಸರ್ ಹೊಡೀಬೇಕು ಎಂದು ರೋಹಿತ್ ಗೆ ಹೇಳಿದ್ದಾರೆ. ಇದಕ್ಕೆ ಅವರ ಉತ್ತರ ಏನಿತ್ತು ವಿಡಿಯೋ ನೋಡಿ.
ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ ಕಾರ್ಯಕ್ರಮಕ್ಕೆ ಮುಂಬೈ ಕ್ರಿಕೆಟ್ ಸಂಸ್ಥೆ ಗಣ್ಯರನ್ನು ಆಹ್ವಾನಿಸಿತ್ತು. ರೋಹಿತ್ ಶರ್ಮಾ ಪೋಷಕರೇ ಸ್ಟ್ಯಾಂಡ್ ಉದ್ಘಾಟಿಸಿದರು. ಈ ವೇಳೆ ರೋಹಿತ್ ಕುಟುಂಬಸ್ಥರೆಲ್ಲರೂ ಹಾಜರಿದ್ದರು.
ಉದ್ಘಾಟನೆ ಬಳಿಕ ರೋಹಿತ್ ಗೆ ಅಭಿನಂದಿಸಲು ಬಂದ ರವಿಶಾಸ್ತ್ರಿ ಆ ಸ್ಟ್ಯಾಂಡ್ ಗೆ ಮುಂದಿನ ಸಾರಿ ನೀನು ಸಿಕ್ಸರ್ ಹೊಡೀಬೇಕು ಎಂದು ಹೇಳಿದ್ದಾರೆ. ಇದಕ್ಕೆ ರೋಹಿತ್ ಕೂಡಾ ನಗು ನಗುತ್ತಾ ಅದೂ ಆಗುತ್ತದೆ ಎಂದು ಪ್ರಾಮಿಸ್ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿದ್ದ ಗಣ್ಯರೂ ಅದನ್ನೇ ಆಶಿಸಿದ್ದರು. ರೋಹಿತ್ ಶರ್ಮಾ ಸಿಕ್ಸರ್ ಸ್ಟ್ಯಾಂಡ್ ಗೆ ತಲುಪಬೇಕು ಎಂದಿದ್ದಾರೆ. ಅಭಿಮಾನಿಗಳೂ ಇದನ್ನೇ ಆಶಿಸುತ್ತಿದ್ದಾರೆ. ಇದೀಗ ಐಪಿಎಲ್ ನಲ್ಲಿ ರೋಹಿತ್ ಮುಂಬೈ ಮೈದಾನದಲ್ಲಿ ಆಡುವಾಗ ಸಿಕ್ಸರ್ ಹೊಡೆಯುತ್ತಾರಾ ನೋಡಬೇಕಿದೆ.