ಮುಂಬೈ: ವಾಂಖೆಡೆ ಮೈದಾನದಲ್ಲಿ ತಮ್ಮ ಹೆಸರಿನ ಸ್ಟ್ಯಾಂಡ್ ಉದ್ಘಾಟನೆಗೆ ಬಂದಿದ್ದ ಸಹೋದರನಿಗೆ ರೋಹಿತ್ ಶರ್ಮಾ ಎಲ್ಲರ ಎದುರೇ ತಮ್ಮದೇ ಶೈಲಿಯಲ್ಲಿ ಬೈದ ವಿಡಿಯೋ ಈಗ ವೈರಲ್ ಆಗಿದೆ.
ರೋಹಿತ್ ಶರ್ಮಾ ಗೌರವಾರ್ಥ ಮುಂಬೈ ಮೈದಾನದ ಒಂದು ಸ್ಟ್ಯಾಂಡ್ ಗೆ ಅವರ ಹೆಸರಿಡಲಾಗಿದೆ. ಈ ಕಾರ್ಯಕ್ರಮಕ್ಕೆ ರೋಹಿತ್ ಶರ್ಮಾ ತಂದೆ-ತಾಯಿ, ಸಹೋದರ ಆತನ ಪತ್ನಿ ಸೇರಿದಂತೆ ಇಡೀ ಕುಟುಂಬವೇ ಹಾಜರಿತ್ತು.
ಕಾರ್ಯಕ್ರಮದ ಬಳಿಕ ತಮ್ಮ ತಂದೆ, ತಾಯಿಯನ್ನು ರೋಹಿತ್ ಸ್ವತಃ ತಾವೇ ಕೈ ಹಿಡಿದು ಕಾರಿನ ಬಳಿ ಕರೆದೊಯ್ದಿದ್ದಾರೆ. ಆದರೆ ಕಾರು ನೋಡಿ ರೋಹಿತ್ ಸಹೋದರನ ಮೇಲೆ ಸಿಟ್ಟಾಗಿದ್ದಾರೆ. ಕಾರಿನ ಹಿಂಭಾಗ ಡ್ಯಾಮೇಜ್ ಆಗಿದ್ದು ನೋಡಿ ರೋಹಿತ್ ಎಲ್ಲರ ಎದುರೇ ಸಹೋದರನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದೇನಾಯ್ತು ಎಂದು ರೋಹಿತ್ ಪ್ರಶ್ನಿಸಿದಾಗ ಸಹೋದರ ರಿವರ್ಸ್ ಬರುವಾಗ ಡ್ಯಾಮೇಜ್ ಆಗಿದ್ದು ಎಂದಿದ್ದಾರೆ. ಇದಕ್ಕೆ ಸಿಟ್ಟಾದ ರೋಹಿತ್ ಯಾರು ನೀನೇ ಮಾಡಿದ್ದಾ ಎಂದು ಕೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.