ಮುಂಬೈ: ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ರೋಚಕ 12 ರನ್ ಗಳ ಗೆಲುವು ಸಾಧಿಸಲು ರೋಹಿತ್ ಶರ್ಮಾ ಕೊಡುಗೆ ಅಪಾರ. ಡಗ್ ಔಟ್ ನಲ್ಲಿ ಕುಳಿತಲ್ಲಿಂದಲೇ ಅವರು ಕೆಎಲ್ ರಾಹುಲ್ ವಿಕೆಟ್ ಪಡೆಯಲು ಮಾಸ್ಟರ್ ಪ್ಲ್ಯಾನ್ ಮಾಡಿದ ವಿಡಿಯೋ ಈಗ ವೈರಲ್ ಆಗಿದೆ.
ನಿನ್ನೆಯ ಪಂದ್ಯದಲ್ಲಿ ಡೆಲ್ಲಿಗೆ ಗೆಲ್ಲುವ ಎಲ್ಲಾ ಅವಕಾಶವಿತ್ತು. ಹಾಗಿದ್ದರೂ ಡೆಲ್ಲಿ ಸೋತಿದ್ದು ಮುಂಬೈ ತಂಡದ ಕೊನೆಯ ಓವರ್ ಗಳ ಚಾಣಕ್ಷ್ಯ ಬೌಲಿಂಗ್ ನಿಂದಾಗಿ ಇದರ ರೂವಾರಿ ರೋಹಿತ್ ಶರ್ಮಾ ಎಂದರೆ ತಪ್ಪಾಗಲಾರದು.
ಒಂದು ಹಂತದಲ್ಲಿ 165 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಡೆಲ್ಲಿ ತಂಡದ ಸೋಲಿಗೆ ಮುನ್ನುಡಿ ಬರೆದಿದ್ದು ರೋಹಿತ್ ಶರ್ಮಾ. ಇಂಪ್ಯಾಕ್ಟ್ ಫುಲ್ ಪ್ಲೇಯರ್ ಆಗಿದ್ದ ರೋಹಿತ್ ಮುಂಬೈ ಫೀಲ್ಡಿಂಗ್ ವೇಳೆ ಮೈದಾನಕ್ಕಿಳಿದಿರಲಿಲ್ಲ. ಆದರೆ ಡಗ್ ಔಟ್ ನಲ್ಲಿ ಕುಳಿತೇ ತಂಡದ ಗೆಲುವಿಗೆ ಮುನ್ನಡಿ ಬರೆದಿದ್ದಾರೆ.
ಡಗ್ ಔಟ್ ನಲ್ಲಿ ಕುಳಿತುಕೊಂಡೇ ಮೈದಾನದಲ್ಲಿದ್ದ ನಾಯಕ ಹಾರ್ದಿಕ್ ಪಾಂಡ್ಯಗೆ ಲೆಗ್ ಸ್ಪಿನ್ನರ್ ಬಳಸುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಲೆಗ್ ಸ್ಪಿನ್ನರ್ ಹಾಕಿದ ತಕ್ಷಣ ರಾಹುಲ್ ಔಟಾಗಿ ಮರಳಿದ್ದಾರೆ. ಇದರ ಬೆನ್ನಲ್ಲೇ ಡೆಲ್ಲಿ ಸೋಲಿನ ಕಡೆಗೆ ಮುಖ ಮಾಡಿದೆ.
ಅವರು ಸನ್ನೆ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಲೀಡರ್ ಯಾವತ್ತಿದ್ದರೂ ಲೀಡರ್ ಎಂದಿದ್ದಾರೆ.