Select Your Language

Notifications

webdunia
webdunia
webdunia
Friday, 25 April 2025
webdunia

IPL 2025 RR vs RCB: ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದ ಆರ್ ಸಿಬಿ

Virat Kohli

Krishnaveni K

ಜೈಪುರ , ಭಾನುವಾರ, 13 ಏಪ್ರಿಲ್ 2025 (18:49 IST)
Photo Credit: X
ಜೈಪುರ: ಐಪಿಎಲ್ 2025 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಇಂದು ನಡೆದ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ.

ಟಾಸ್ ಗೆದ್ದ ಆರ್ ಸಿಬಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ರಾಜಸ್ಥಾನ್ ರಾಯಲ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು.

174 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಆರ್ ಸಿಬಿಗೆ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭ ನೀಡಿದರು. ಫಿಲ್ ಸಾಲ್ಟ್ ಎಂದಿನಂತೆ ಅಬ್ಬರದ ಆಟವಾಡಿದರು. 33 ಎಸೆತ ಎದುರಿಸಿದ ಅವರು 65 ರನ್ ಗಳಿಸಿ ಔಟಾದರು.

ಇನ್ನು ವಿರಾಟ್ ಕೊಹ್ಲಿ ಆರಂಭದಲ್ಲಿ ನಿಧಾನಗತಿಯ ಆಟವಾಡಿದರೂ ನಂತರ ಸುಧಾರಿಸಿಕೊಂಡು 45 ಎಸೆತಗಳಿಂದ 62 ರನ್ ಗಳಿಸಿ ಅಜೇಯರಾಗುಳಿದರು. ಅವರಿಗೆ ಸಾಥ್ ನೀಡಿದ ದೇವದತ್ತ್ ಪಡಿಕ್ಕಲ್ 40 ರನ್ ಗಳಿಸಿದರು.

ಇದರಿಂದಾಗಿ ಆರ್ ಸಿಬಿ 17.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 175 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಕಳೆದ ಪಂದ್ಯ ಸೋತಿದ್ದ ಆರ್ ಸಿಬಿಗೆ ಈ ಗೆಲುವು ಅನಿವಾರ್ಯವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

IPL 2025 RCB vs RR: ಆರ್ ಸಿಬಿ ಗೆಲುವಿಗೆ 174 ರನ್ ಗಳ ಗುರಿ ನೀಡಿದ ರಾಜಸ್ಥಾನ್ ರಾಯಲ್ಸ್