Select Your Language

Notifications

webdunia
webdunia
webdunia
webdunia

IPL 2025: ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್‌ನಿಂದ ಆಲ್‌ರೌಂಡರ್‌ ಹೊರಕ್ಕೆ

IPL 2025, GT vs LSG Match Live, Glenn Phillips

Sampriya

ಬೆಂಗಳೂರು , ಶನಿವಾರ, 12 ಏಪ್ರಿಲ್ 2025 (15:19 IST)
Photo Courtesy X
ಬೆಂಗಳೂರು: ಇಂದಿನ ಐಪಿಎಲ್ ಪಂದ್ಯಾಟದಲ್ಲಿ ಲಕ್ನೋವನ್ನು ಎದುರಿಸಲಿರುವ ಗುಜರಾತ್ ಟೈಟನ್ಸ್‌ಗೆ ದೊಡ್ಡ ಆಘಾತದೊಂದಿಗೆ ಕ್ರೀಡಾಂಗಣಕ್ಕಿಳಿದಿದೆ.

ಗುಜರಾತ್ ಟೈಟಾನ್ಸ್ ಆಲ್‌ರೌಂಡರ್ ಗ್ಲೆನ್ ಫಿಲಿಪ್ಸ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನ ಉಳಿದ ಪಂದ್ಯಗಳಿಂದ ಹೊರಗಿಟ್ಟಿರುವುದಾಗಿ ಶನಿವಾರ ಫ್ರಾಂಚೈಸಿ ತಿಳಿಸಿದೆ. ತವರಿಗೆ ಮರಳಿರುವ ಕಿವೀಸ್ ಆಲ್‌ರೌಂಡರ್ ಫಿಲಿಪ್ಸ್‌ ಏಪ್ರಿಲ್ 6 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಪಂದ್ಯಾಟದ ವೇಳೆ ಗಾಯಗೊಂಡಿದ್ದರುಎಂದು ಟೈಟಾನ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಫಿಲಿಪ್ಸ್ ಎಲ್ಲಾ ಋತುವಿನಲ್ಲಿ ಜಿಟಿಯ ಪ್ಲೇಯಿಂಗ್ XI ನ ಭಾಗವಾಗಿಲ್ಲದಿದ್ದರೂ, SRH ವಿರುದ್ಧದ ಪಂದ್ಯದಲ್ಲಿ ಅವರು ಬದಲಿ ಫೀಲ್ಡರ್ ಆಗಿ ಆಡಿದ್ದರು.

SRH ಇನ್ನಿಂಗ್ಸ್ ಸಮಯದಲ್ಲಿ ಪವರ್‌ಪ್ಲೇನ ಅಂತಿಮ ಓವರ್‌ನಲ್ಲಿ ಗಾಯ ಸಂಭವಿಸಿದೆ. ಪಾಯಿಂಟ್‌ನಲ್ಲಿ ನಿಂತಿದ್ದ ಫಿಲಿಪ್ಸ್, ಇಶಾನ್ ಕಿಶನ್ ಅವರ ಹೊಡೆತವನ್ನು ಬೆನ್ನಟ್ಟಿದರು. ಆದರೆ ಅವರು ಚೆಂಡನ್ನು ಹಿಂದಕ್ಕೆ ಎಸೆದಾಗ ಗಾಯಗೊಂಡಿದ್ದ ಅವರು ಮೈದಾನದಿಂದ ಹೊರನಡೆದಿದ್ದರು.

ಗುಜರಾತ್ ಟೈಟಾನ್ಸ್ ಶಿಬಿರದಿಂದ ಮನೆಗೆ ಮರಳಿದ ಎರಡನೇ ಆಟಗಾರ ಫಿಲಿಪ್ಸ್. ಇದಕ್ಕೂ ಮುನ್ನ, ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ವೈಯಕ್ತಿಕ ಕಾರಣಗಳಿಂದ ತಂಡವನ್ನು ತೊರೆದು ತವರಿಗೆ ಮರಳಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

Virat Kohli: 300 ಕೋಟಿ ರೂ. ಕೊಡುತ್ತೇನೆಂದರೂ ಈ ಉತ್ಪನ್ನವನ್ನು ರಿಜೆಕ್ಟ್ ಮಾಡಿದ್ದೇಕೆ ವಿರಾಟ್ ಕೊಹ್ಲಿ