ಬೆಂಗಳೂರು: ಐಪಿಎಲ್ 2025 ರಲ್ಲಿ ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಅತ್ತ ನಗಲೂ ಆಗದೇ, ಇತ್ತ ಅಳಲೂ ಆಗದಂತಹ ಪರಿಸ್ಥಿತಿಯಲ್ಲಿದ್ದಾರೆ. ಇದಕ್ಕೆ ಕಾರಣ ಕೆಎಲ್ ರಾಹುಲ್.
ನಿನ್ನೆಯ ಪಂದ್ಯದಲ್ಲಿ ಅಭಿಮಾನಿಗಳಿಗೆ ಯಾರನ್ನು ಸಪೋರ್ಟ್ ಮಾಡಬೇಕೆಂಬುದೇ ಕನ್ ಫ್ಯೂಸ್ ಆಗಿತ್ತು. ಹಾಗಿದ್ದರೂ ತವರಿನ ತಂಡವನನ್ಉ ಬಿಟ್ಟುಕೊಡಕ್ಕಾಗುತ್ತಾ? ಆದರೆ ಎದುರಾಳಿ ತಂಡದಲ್ಲಿದ್ದಿದ್ದು ನಮ್ಮವರೇ ಆದ ಕೆಎಲ್ ರಾಹುಲ್.
ಕೊನೆಗೆ ರಾಹುಲ್ ರಿಂದಲೇ ಆರ್ ಸಿಬಿ ಸೋತು ಹೋಯಿತು. ಹೀಗಾಗಿ ಅಭಿಮಾನಿಗಳು ಅತ್ತ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಮಾಡಿದ ಎಂದು ಖುಷಿಪಡೋದಾ, ಆರ್ ಸಿಬಿ ಸೋತಿತು ಎಂದು ಅಳೋದಾ ಎಂದು ಗೊತ್ತಾಗದೇ ಸಂದಿಗ್ಧಕ್ಕೆ ಸಿಲುಕಿದ್ದಾರೆ.
ಪಂದ್ಯದ ಬಳಿಕ ಸಾಕಷ್ಟು ಜನ ಕೆಎಲ್ ರಾಹುಲ್ ಗೆ ಕಾಂಎಂಟ್ ಮಾಡಿದ್ದು ನೀವು ನಮ್ಮ ಕರ್ನಾಟಕ ಸಿಂಹ ಎಂದಿದ್ದಾರೆ. ನಿಮ್ಮನ್ನು ಆಯ್ಕೆ ಮಾಡದೇ ಎಷ್ಟು ದೊಡ್ಡ ತಪ್ಪು ಮಾಡಿದೆ ಎಂದು ಆರ್ ಸಿಬಿಗೆ ಈಗ ಅನಿಸಿರಬಹುದು ಎಂದಿದ್ದಾರೆ. ಮತ್ತೆ ಕೆಲವರು ಇದೊಂದು ಪಂದ್ಯದಲ್ಲಿ ಬಿಟ್ಟುಕೊಡಬಾರದಿತ್ತಾ ಎಂದು ರಾಹುಲ್ ಗೆ ಪ್ರಶ್ನೆ ಮಾಡಿದ್ದಾರೆ.