ಬೆಂಗಳೂರು: ಐಪಿಎಲ್ 2025 ರಲ್ಲಿ ಆರ್ ಸಿಬಿ ವಿರುದ್ಧ ಪಂದ್ಯ ಗೆಲ್ಲಿಸಿದ ನಂತರ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ, ಕನ್ನಡಿಗ ಕೆಎಲ್ ರಾಹುಲ್ ಸೆಲೆಬ್ರೇಷನ್ ಎಲ್ಲರ ಗಮನ ಸೆಳೆದಿದೆ. ಇದೀಗ ಆರ್ ಸಿಬಿ ಫ್ಯಾನ್ಸ್ ನೀವೂ ಡೆಲ್ಲಿಗೆ ಹೋಗಿ ನಿಮ್ಮ ತವರಿನಲ್ಲಿ ಇದೇ ರೀತಿ ಸೆಲೆಬ್ರೇಷನ್ ಮಾಡಿ ಎಂದು ಆಗ್ರಹಿಸಿದ್ದಾರೆ.
ಚಿನ್ನಸ್ವಾಮಿ ಮೈದಾನದಲ್ಲಿ ಆರ್ ಸಿಬಿ ಸೋಲಿನ ಸರಪಳಿ ಮತ್ತೆ ಮುಂದುವರಿದಿದೆ. ಎಲ್ಲಾ ತಂಡಗಳೂ ತವರಿನಲ್ಲಿ ಬಲಿಷ್ಠವಾಗಿದ್ದರೆ ಆರ್ ಸಿಬಿ ಅದಕ್ಕೆ ಅಪವಾದ. ಹೊರಗಿನ ಪಂದ್ಯವನ್ನು ಗೆದ್ದು ತವರಿನಲ್ಲಿಯೇ ಸೋಲುತ್ತಿದೆ.
ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ಗೆಲ್ಲಿಸಿದ ಬಳಿಕ ಇದು ನನ್ನ ಗ್ರೌಂಡ್, ನನ್ನ ಮನೆ ಎಂದು ರಾಹುಲ್ ಸೆಲೆಬ್ರೇಷ್ ಮಾಡಿದ್ದು ಕೆಲವು ಆರ್ ಸಿಬಿ ಅಭಿಮಾನಿಗಳನ್ನು ಕೆರಳಿಸಿದೆ. ಹೀಗಾಗಿ ನೀವೂ ಕೂಡಾ ಡೆಲ್ಲಿಗೆ ಹೋಗಿ ಗೆದ್ದು ಪ್ರತ್ಯುತ್ತರ ಕೊಡಿ ಎಂದು ಕೊಹ್ಲಿಗೆ ಆಗ್ರಹಿಸಿದ್ದಾರೆ.
ವಿರಾಟ್ ಕೊಹ್ಲಿ ಯಾವುದನ್ನೂ ಬಾಕಿ ಇಟ್ಟುಕೊಳ್ಳುವವರಲ್ಲ. ಮುಂದೆ ಆರ್ ಸಿಬಿಯೂ ಡೆಲ್ಲಿಯಲ್ಲಿ ಪಂದ್ಯವಾಡಬೇಕಿದೆ. ಡೆಲ್ಲಿ ವಿರಾಟ್ ಕೊಹ್ಲಿ ತವರು. ಹೀಗಾಗಿ ನೀವೂ ಆರ್ ಸಿಬಿ ಪಂದ್ಯ ಗೆಲ್ಲುವಂತಹ ಇನಿಂಗ್ಸ್ ಆಡಿ ಕೆಎಲ್ ರಾಹುಲ್ ಥರಾ ಇದು ನನ್ನ ಮೈದಾನ ಎಂದು ತಿರುಗೇಟು ಕೊಡಿ ಎಂದು ಫ್ಯಾನ್ಸ್ ಆಗ್ರಹಿಸಿದ್ದಾರೆ.