ಬೆಂಗಳೂರು: ತವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಎದುರಿಸುತ್ತಿರುವ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಲಿದೆ. ಟಾಸ್ ಗೆದ್ದ ಡಿಸಿ ನಾಯಕ ಅಕ್ಷರ್ ಪಟೇಲ್ ಮೊದಲು ಫೀಲ್ಡಿಂಗ್ ಆಯ್ದುಕೊಂಡು, ಆರ್‌ಸಿಬಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್‌ಸಿಬಿ ಎರಡನೇ ಪಂದ್ಯಾಟ ಇದಾಗಿದೆ. ಶುಭ್‌ಮನ್ ಗಿಲ್ ನಾಯಕತ್ವದ ಗುಜರಾತ್ ವಿರುದ್ಧ ಪಂದ್ಯಾಟದಲ್ಲಿ ಆರ್‌ಸಿಬಿ ತವರಿನಲ್ಲಿ ಸೋಲು ಅನುಭವಿಸಿತು. ಇದರಿಂದ ಆರ್‌ಸಿವಿ ಅಭಿಮಾನಿಗಳಿಗೆ ಬಾರೀ ನಿರಾಸೆ ಮೂಡಿಸಿದತ್ತು.
ಇಂದು ಎರಡನೇ ಬಾರೀ ಡಿಸಿ ವಿರುದ್ಧ ಆರ್‌ಸಬಿ ಮುಖಾಮುಖಿಯಾಗಲಿದೆ.
ಡಿಸಿ ಇದುವರೆಗೂ ನಡೆದ ಮೂರು ಪಂದ್ಯಾಟಗಳಲ್ಲೂ ಗೆಲುವು ಸಾಧಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ.
ಆರ್‌ಸಿವಿ ಇದುವರೆಗೆ ಎದುರಿಸಿದ ನಾಲ್ಕು ಪಂದ್ಯಾಟಗಳಲ್ಲಿ ಮೂರು ಗೆದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ.