2025 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಂಗಳವಾರದ ಪಂದ್ಯಾಟದಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಬೆಂಗಳೂರು ಚಾಲೆಂಜರ್ಸ್ ತಮ್ಮ ಅದ್ಭುತ ಪ್ರದರ್ಶನದಿಂದ ಮಣಿಸಿದರು. ಪಂದ್ಯಾಟದ ಬಳಿಕ ಮುಂಬೈ ಇಂಡಿಯನ್ಸ್‌ನ ಯುವ ಆಟಗಾರರು ಕಿಂಗ್ ಕೊಹ್ಲಿ ಜತೆ ಫೋಟೋ ತೆಗೆಸಿಕೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎದುರಾಳಿಯಾಗಿದ್ದರು, ಕಿಂಗ್ ಕೊಹ್ಲಿ ಎಲ್ಲರ ಫೇವರೆಟ್ ಎಂದು ವಿಡಿಯೋವನ್ನು ವೈರಲ್ ಮಾಡಲಾಗುತ್ತಿದೆ.
ಪಂದ್ಯದ ನಂತರ ವಿರಾಟ್ ಕೊಹ್ಲಿ ತಮ್ಮ ಫೋನ್ ನೋಡುತ್ತಿದ್ದರು. ಅಲ್ಲಿಗೆ ಬಂದ ಮುಂಬೈನ ಯುವ ಆಟಗಾರರು ಫೋಟೋ ಕೇಳಿದರು. ಅದಕ್ಕೆ ಸಂತೋಷದಿಂದ ಒಪ್ಪಿದ ವಿರಾಟ್ ನಗುವಿನೊಂದಿಗೆ ಫೋಟೋ ನೀಡಿದರು. ಮುಂಬೈ ತಂಡದ ರಾಜ್ ಬಾವಾ, ಅಶ್ವನಿ ಕುಮಾರ್ ಮತ್ತು ಸತ್ಯನಾರಾಯಣ ರಾಜು ಅನುಭವಿ ಮುಂಬೈ ಆಟಗಾರರೊಂದಿಗೆ ಪೋಸ್ ನೀಡಿದರೆ, ರಾಬಿನ್ ಮಿಂಜ್ ಆ ಕ್ಷಣವನ್ನು ಫೋಟೋಗಳಲ್ಲಿ ಸೆರೆಹಿಡಿದರು.
ಐಪಿಎಲ್ 2025ರ 18ನೇ ಆವೃತ್ತಿಯನ್ನು ಆರ್‌ಸಿಬಿ ಗೆಲುವಿನ ಖಾತೆಯೊಂದಿಗೆ ತೆರೆದಿದೆ. ಇದುವರೆಗೂ ನಡೆದ ನಾಲ್ಕು ಪಂದ್ಯಾಟದಲ್ಲಿ ಮೂರರಲ್ಲಿ ಗೆದ್ದು ಟೇಬಲ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದೀಗ ಹ್ಯಾಟ್ರಿಕ್ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ ಎಂಟನೇ ಸ್ಥಾನದಲ್ಲಿದೆ.
ವಿರಾಟ್ ಕೊಹ್ಲಿ ಐಪಿಎಲ್ 2025 ರಲ್ಲಿ 4 ಪಂದ್ಯಗಳಲ್ಲಿ 2 ಅರ್ಧಶತಕಗಳೊಂದಿಗೆ ಅಬ್ಬರಿಸಿದ್ದಾರೆ
ವಿರಾಟ್ ಕೊಹ್ಲಿ ತಮ್ಮ ಐಪಿಎಲ್ 2025 ಅಭಿಯಾನಕ್ಕೆ ಬಲವಾದ ಆರಂಭವನ್ನು ನೀಡಿದ್ದಾರೆ, ತಮ್ಮ ಮೊದಲ ನಾಲ್ಕು ಪಂದ್ಯಗಳಲ್ಲಿ ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಆರಂಭಿಕ ಪಂದ್ಯದಲ್ಲಿ, ಬಲಗೈ ಬ್ಯಾಟ್ಸ್‌ಮನ್ ಅಜೇಯ 59 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು, ನಂತರ ಮುಂದಿನ ಎರಡು ಪಂದ್ಯಗಳಲ್ಲಿ 31 ಮತ್ತು ಏಳು ರನ್‌ಗಳನ್ನು ಗಳಿಸಿದ್ದಾರೆ.