Select Your Language

Notifications

webdunia
webdunia
webdunia
Friday, 25 April 2025
webdunia

Virat Kohli: ಕಿಂಗ್ ಕೊಹ್ಲಿ ಆದ್ರೇನು, ಬಲೂನ್ ನಲ್ಲಿ ಚಿಕ್ಕಮಕ್ಕಳಂತೆ ಆಡ್ತಾರೆ: ವಿಡಿಯೋ

Virat Kohli

Krishnaveni K

ಮುಂಬೈ , ಮಂಗಳವಾರ, 8 ಏಪ್ರಿಲ್ 2025 (11:54 IST)
ಮುಂಬೈ: ವಿರಾಟ್ ಕೊಹ್ಲಿ ಎಂದರೆ ಹಾಲಿ ಕ್ರಿಕೆಟ್ ಜಗತ್ತಿಗೇ ಕಿಂಗ್ ಇರಬಹುದು. ಆದರೆ ಎಷ್ಟೇ ದೊಡ್ಡವರಾದರೂ ಅವರಲ್ಲಿ ಈಗಲೂ ಮಕ್ಕಳ ತುಂಟತನ ಇದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಬಲೂನ್ ನಲ್ಲಿ ಆಡುತ್ತಿರುವ ಕೊಹ್ಲಿ ವಿಡಿಯೋ ಒಂದು ಈಗ ವೈರಲ್ ಆಗಿದೆ.

ಐಪಿಎಲ್ 2025 ರಲ್ಲಿ ನಿನ್ನೆ ಮುಂಬೈ ಇಂಡಿಯನ್ಸ್ ಮತ್ತು ಆರ್ ಸಿಬಿ ನಡುವೆ ಪಂದ್ಯವಿತ್ತು. ಈ ಪಂದ್ಯವನ್ನು ಆರ್ ಸಿಬಿ 12 ರನ್ ಗಳಿಂದ ಗೆದ್ದುಕೊಂಡಿತ್ತು. ಕೊಹ್ಲಿ 42 ಎಸೆತಗಳಿಂದ 67 ರನ್ ಗಳಿಸಿ ತಂಡ ದೊಡ್ಡ ಮೊತ್ತ ಗಳಿಸಲು ನೆರವಾಗಿದ್ದರು.

ನಿನ್ನೆಯ ಪಂದ್ಯ ಗೆದ್ದ ಬಳಿಕ ಕೊಹ್ಲಿ ಪೆವಿಲಿಯನ್ ಗೆ ಮರಳುವಾಗ ಮೆಟ್ಟಿಲುಗಳ ಬಳಿ ಯಾರೋ ಅಭಿಮಾನಿಗಳು ತೇಲಿಬಿಟ್ಟ ಬಲೂನ್ ಹಾರಾಡುತ್ತಿತ್ತು. ಇದನ್ನು ನೋಡಿ ಕೊಹ್ಲಿಯೊಳಗಿದ್ದ ಪುಟ್ಟ ಬಾಲಕನ ಮನಸ್ಸು ಹೊರಬಂದಿದೆ.

ಬಲೂನ್ ಜೊತೆ ಆಟವಾಡುತ್ತಾ ಕೊಹ್ಲಿ ಮೆಟ್ಟಿಲು ಹತ್ತಿ ಪೆವಿಲಿಯನ್ ಕಡೆಗೆ ತೆರಳಿದ್ದಾರೆ. ಯಾರೋ ಅಭಿಮಾನಿಯೊಬ್ಬರು ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ನೋಡಿ ಕೊಹ್ಲಿ ಅಭಿಮಾನಿಗಳೂ ಖುಷಿಪಟ್ಟಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ.


Share this Story:

Follow Webdunia kannada

ಮುಂದಿನ ಸುದ್ದಿ

IPL 2025: ಆರ್ ಸಿಬಿ ಗೆಲ್ಲುತ್ತಿದ್ದಂತೇ ಅಂಬಟಿ ರಾಯುಡು ಪ್ಲೇಟ್ ಚೇಂಜ್: ಹೀಗೂ ಇರ್ತಾರಾ