ಮುಂಬೈ: ಐಪಿಎಲ್ 2025 ರಲ್ಲಿ ನಿನ್ನೆ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧವೂ ಆರ್ ಸಿಬಿ ಗೆಲ್ಲುತ್ತಿದ್ದಂತೆ ಕಾಮೆಂಟೇಟರ್, ಸಿಎಸ್ ಕೆ ಮಾಜಿ ಆಟಗಾರ ಅಂಬಟಿ ರಾಯುಡು ಪ್ಲೇಟ್ ಚೇಂಜ್ ಮಾಡಿದ್ದಾರೆ. ಇವರ ಕಾಮೆಂಟ್ ಗೆ ಜನ ಹೀಗೂ ಇರ್ತಾರಾ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಇಷ್ಟು ದಿನ ಆರ್ ಸಿಬಿಯನ್ನು ಇನ್ನಿಲ್ಲದಂತೆ ಟೀಕಿಸುತ್ತಲೇ ಇದ್ದ ಅಂಬಟಿ ರಾಯುಡು ಇದೀಗ ಉಲ್ಟಾ ಹೊಡೆದಿದ್ದಾರೆ. ಮೊನ್ನೆ ಮೊನ್ನೆಯವರೆಗೂ ಆರ್ ಸಿಬಿ ಖಂಡಿತಾ ಕಪ್ ಗೆಲ್ಲಲ್ಲ. ಈ ಬಾರಿಯಂತೂ ಗೆಲ್ಲುವುದೇ ಬೇಡ. ಸಿಎಸ್ ಕೆಯೇ ಗೆಲ್ಲಲಿ. ಹಾಗಿದ್ದರೂ ಆರ್ ಸಿಬಿಯಂತಹ ತಂಡ ಕೇವಲ ಮನರಂಜನೆಗಾದರೂ ಐಪಿಎಲ್ ನಲ್ಲಿರಬೇಕು ಎಂದು ಉಡಾಫೆ ಮಾಡಿದ್ದರು.
ಇದರ ಬೆನ್ನಲ್ಲೇ ಆರ್ ಸಿಬಿ ಫ್ಯಾನ್ಸ್ ಅವರನ್ನು ರೋಸ್ಟ್ ಮಾಡಿದ್ದರು. ಇದೀಗ ನಿನ್ನೆಯ ಪಂದ್ಯದ ಬಳಿಕ ಮತ್ತೆ ಅಂಬಟಿ ರಾಯುಡು ಕಾಮೆಂಟ್ ಮಾಡಿದ್ದಾರೆ. ಈ ಬಾರಿ ಆರ್ ಸಿಬಿ ಕಪ್ ಗೆಲ್ಲಲಿದೆ ಎಂದು ಉಲ್ಟಾ ಹೊಡೆದಿದ್ದಾರೆ.
ಅವರ ಈ ಕಾಮೆಂಟ್ ಗೆ ಜನ ಪ್ರತಿಕ್ರಿಯಿಸಿದ್ದು ಜನ ಹೀಗೂ ಇರ್ತಾರಾ? ಎಂದಿದ್ದಾರೆ. ಮತ್ತೆ ಕೆಲವರು ಈಗ ಬಹುಶಃ ರಾಯುಡುಗೆ ಆರ್ ಸಿಬಿ ತಾಕತ್ತು ಏನು ಎಂದು ಅರ್ಥವಾಗಿರಬೇಕು ಎಂದು ವ್ಯಂಗ್ಯ ಮಾಡಿದ್ದಾರೆ.