ಚೆನ್ನೈ: ಮೊಣಕೈ ಮುರಿತದಿಂದಾಗಿ ರುತುರಾಜ್ ಗಾಯಕ್ವಾಡ್ ಅವರನ್ನು IPL 2025 ರಿಂದ ಹೊರಗಿಡಲಾಗಿದೆ. ಈದರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಂದಿನ ನಾಯಕತ್ವ ಜವಾಬ್ದಾರಿಯನ್ನು ಎಂಎಸ್ ಧೋನಿ ವಹಿಸಿಕೊಳ್ಳಲಿದ್ದಾರೆ.
ರುತುರಾಜ್ ಅವರು ಪಂದ್ಯಾಟದಿಂದ ಹೊರಗುಳಿಯುವ ಮೂಲಕ ಚೆನ್ನೈಗೆ ದೊಡ್ಡ ಹೊಡೆತ ಬಿದ್ದಿದೆ. ಶುಕ್ರವಾರ ಚೆಪಾಕ್‌ನಲ್ಲಿ ನಡೆಯಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಾಟದಲ್ಲಿ ತಂಡದ ನಾಯಕನ ಜವಾಬ್ದಾರಿಯನ್ನು ಎಂಎಸ್ ಧೋನಿ ವಹಿಸಿಕೊಳ್ಳಲಿದ್ದಾರೆ.
ರುತುರಾಜ್ ಅವರಿಗೆ ಮೊಣಕೈಗೆ ಪೆಟ್ಟು ಬಿದ್ದಿದ್ದು, ಅವರ ನೋವಿಗೆ ಶಸ್ತ್ರಚಿಕಿತ್ಸೆ ಒಳಗಾಗಲಿದ್ದಾರೆ. ಆದ್ದರಿಂದ ನಾವು ನಿರಾಶೆಗೊಂಡಿದ್ದೇವೆ ಮತ್ತು ಅವರ ಬಗ್ಗೆ ನಮಗೆ ಸಹಾನುಭೂತಿ ಇದೆ. ಆಡಲು ಪ್ರಯತ್ನಿಸುವ ವಿಷಯದಲ್ಲಿ ಅವರು ಮಾಡಿದ ಪ್ರಯತ್ನಗಳನ್ನು ನಾವು ಪ್ರಶಂಸಿಸುತ್ತೇವೆ, ಆದರೆ ದುರದೃಷ್ಟವಶಾತ್, ಅವರು ಇಂದಿನಿಂದ ಪಂದ್ಯಾವಳಿಯಿಂದ ಹೊರಗುಳಿಯುತ್ತಾರೆ. ನಮ್ಮಲ್ಲಿ ಐಪಿಎಲ್‌ನ ಉಳಿದ ಭಾಗಕ್ಕೆ ನಾಯಕನಾಗಿ ಎಂಎಸ್ ಧೋನಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಫ್ಲೆಮಿಂಗ್ ಗುರುವಾರ ತಿಳಿಸಿದ್ದಾರೆ.