Select Your Language

Notifications

webdunia
webdunia
webdunia
webdunia

ತಂದೆ ಬಗ್ಗೆ ಯುವರಾಜ್ ಸಿಂಗ್ ನೀಡಿದ್ದ ಹಳೇ ಹೇಳಿಕೆ ಈಗ ವೈರಲ್

Yuvraj Singh

Krishnaveni K

ಮುಂಬೈ , ಗುರುವಾರ, 5 ಸೆಪ್ಟಂಬರ್ 2024 (10:56 IST)
Photo Credit: Facebook
ಮುಂಬೈ: ನನ್ನ ಮಗನ ವೃತ್ತಿ ಜೀವನ ಹಾಳು ಮಾಡಿದ್ದು ಎಂಎಸ್ ಧೋನಿ ಎಂದಿದ್ದ ತಂದೆ ಯೋಗರಾಜ್ ಸಿಂಗ್ ಬಗ್ಗೆ ಯುವರಾಜ್ ಸಿಂಗ್ ಹೇಳಿದ್ದ ಹಳೇ ಹೇಳಿಕೆಯ ವಿಡಿಯೋವೊಂದು ಈಗ ವೈರಲ್ ಆಗಿದೆ.

ಯೋಗರಾಜ್ ಸಿಂಗ್ ಇದು ಎರಡನೆಯ ಬಾರಿಗೆ ಧೋನಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ನನ್ನ ಮಗನ ವೃತ್ತಿ ಜೀವನ ಹಾಳು ಮಾಡಿದ್ದು ಧೋನಿ ಎಂದಿದ್ದರು. ಅವರ ಈ ಹೇಳಿಕೆಗೆ ಧೋನಿ ಅಭಿಮಾನಿಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಬಿಟ್ಟಿ ಪ್ರಚಾರಕ್ಕಾಗಿ ಧೋನಿ ವಿರುದ್ಧ ಗೂಬೆ ಕೂರಿಸುತ್ತಿದ್ದಾರೆ ಎಂದು ಅನೇಕರು ಜರೆದಿದ್ದರು.  ಆದರೆ ಇದರ ಬೆನ್ನಲ್ಲೇ  ಅಭಿಮಾನಿಗಳು ಯುವರಾಜ್ ಸಿಂಗ್ ಕಳೆದ ವರ್ಷ ಪಾಡ್ ಕಾಸ್ಟ್ ಒಂದರಲ್ಲಿ ನೀಡಿದ್ದ ಸಂದರ್ಶನವೊಂದರ ತುಣುಕನ್ನು ವೈರಲ್ ಮಾಡಿದ್ದಾರೆ.

ಈ ಸಂದರ್ಶನದಲ್ಲಿ ಯುವರಾಜ್ ಸಿಂಗ್ ನನ್ನ ತಂದೆಗೆ ಮಾನಸಿಕ ಸಮಸ್ಯೆಯಿದೆ ಅನಿಸುತ್ತದೆ. ಆದರೆ ಅವರು ಅದನ್ನು ಒಪ್ಪಿಕೊಳ್ಳಲ್ಲ. ನನ್ನ ತಂದೆ ಯಶಸ್ವೀ ಜೀವನ ನಡೆಸಿದರು. ಆದರೆ ಕೆಲವೊಂದು ವಿಚಾರಗಳನ್ನು ಅವರು ಒಪ್ಪಿಕೊಳ್ಳಲ್ಲ. ಅದರಲ್ಲಿ ಇದೂ ಒಂದು ಎಂದಿದ್ದರು. ಆ ವಿಡಿಯೋವನ್ನು ವೈರಲ್ ಮಾಡಿರುವ ಧೋನಿ ಫ್ಯಾನ್ಸ್ ಈ ಕಾರಣಕ್ಕೇ ಯೋಗರಾಜ್ ಆಗಾಗ ಧೋನಿ ವಿರುದ್ಧ ಕಿಡಿ ಕಾರುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನ ವಿರುದ್ಧ ಗೆದ್ದಿದ್ದಕ್ಕೆ ಟೀಂ ಇಂಡಿಯಾಗೆ ಟಾಂಗ್ ಕೊಡುತ್ತಿರುವ ಬಾಂಗ್ಲಾದೇಶ