Select Your Language

Notifications

webdunia
webdunia
webdunia
webdunia

ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿ ಮತ್ತೇ ಅಭಿಮಾನಿಗಳ ಮನಸ್ಸು ಕದ್ದ ಧೋನಿ

DHONI

sampriya

ಬೆಂಗಳೂರು , ಶನಿವಾರ, 25 ಮೇ 2024 (17:58 IST)
Photo By X
ಬೆಂಗಳೂರು: ಆರ್‌ಸಿಬಿ ವಿರುದ್ಧದ ಪಂದ್ಯಾಟದಲ್ಲಿ ಸೋಲುವ ಮೂಲಕ ಐಪಿಎಲ್‌ 2024ರ ಟೂರ್ನಿಯಿಂದ ಹೊರಬಿದ್ದಿರುವ ಸಿಎಸ್‌ಕೆ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ಅವರು ತಮ್ಮ ಸರಳ ನಡವಳಿಕೆ ಮೂಲಕ ಮತ್ತೇ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.
ಟೂರ್ನಿಯಿಂದ ಹೊರಬಿದ್ದ ಬಳಿಕ ಧೋನಿ ಅವರು ತಮ್ಮ ತವರೂರು ರಾಂಚಿಗೆ ವಾಪಾಸ್ಸಾಗಿದ್ದಾರೆ. ಈ ವೇಳೆ ಅವರು ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣ ಬೆಳೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಎಲ್ಲಾ ಕ್ರಿಕೆಟಿಗರು ಬಿಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸಿದರೆ, ಮಾಹಿ ಜನಸಾಮಾನ್ಯರಂತೆ ಎಕಾನಮಿ ಕ್ಲಾಸ್‌ ವಿಮಾನದಲ್ಲಿ ಕುಳಿತು ಪ್ರಯಾಣಿಸಿದ್ದಾರೆ. ಈ ವೇಳೆ ಅದೇ ವಿಮಾನದಲ್ಲಿ ಕುಳಿತಿದ್ದ ಸಹ ಪ್ರಯಾಣಿಕರು, ಮಾಹಿಯನ್ನು ನೋಡಿ ಶಾಕ್‌ ಆಗಿದ್ದಾರೆ.

ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಧೋನಿ ಅವರು ತಮ್ಮ ಲಗೇಜ್‌ ಅನ್ನು ವಿಮಾನದಲ್ಲಿಸಿರುವ ಓವರ್‌ಹೆಡ್ ಕಂಪಾರ್ಟ್‌ಮೆಂಟ್‌ನಲ್ಲಿ ಇರಿಸುತ್ತಿರುವುದನ್ನು ಕಾಣಬಹುದು.
ನಂತರ ತಮ್ಮ ಸೀಟ್‌ನಲ್ಲಿ ಕುಳಿತುಕೊಳ್ಳುವ ದೃಶ್ಯ ವಿಡಿಯೋದಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ನಲ್ಲಿ ಭಾಗಿಯಾಗಲು ಅಮೆರಿಕಾಗೆ ಹಾರಿದ ಟೀಂ ಇಂಡಿಯಾ